
ಹುಬ್ಬಳ್ಳಿ: ಗೋಕುಲ ರಸ್ತೆಯ ದಿ ಫರ್ನ್ ರೆಸಿಡೆನ್ಸಿಯಲ್ಲಿ ಏಪ್ರಿಲ್ 22ರವರೆಗೆ ನೇಪಾಳದ ರುದ್ರಾಕ್ಷಿ ಪ್ರದರ್ಶನ ಹಾಗೂ ಮಾರಾಟ ಮೇಳವನ್ನು ಹೈದರಾಬಾದ್ ಮೂಲದ ಇಂಡಸ್- ನೇಪಾಳ ರುದ್ರಾಕ್ಷ ಸಂಸ್ಥೆ ಆಯೋಜಿಸಿದೆ. ಮಳಿಗೆಯು ಬೆಳಿಗ್ಗೆ 10.30ರಿಂದ ರಾತ್ರಿ 9ರವರೆಗೆ ತೆರೆದಿರುತ್ತದೆ. ವಿರಳವಾಗಿ ದೊರಕುವ ರತ್ನದ ಹರಳುಗಳು ಲಭ್ಯ ಇವೆ. ಅತ್ಯಂತ ವಿರಳವಾಗಿರುವ ಸುಮಾರು ₹4.5 ಲಕ್ಷ ಬೆಲೆಯ ದುಂಡುಮುಖದ ಏಕಮುಖಿ ರುದ್ರಾಕ್ಷಿಗಳು ಸಿಗಲಿವೆ. ರುದ್ರಾಕ್ಷಿ ಧರಿಸುವುದು ಶುಭದಾಯಕವಾಗಿದೆ ಎಂದು ಇಂಡಸ್-ನೇಪಾಳ ಸಂಸ್ಥೆಯ ನಿರ್ದೇಶಕ ನರೇಂದ್ರ ಕಾಶಿರೆಡ್ಡಿ ತಿಳಿಸಿದ್ದಾರೆ.

j3tvkannada
ಯಾವ ರುದ್ರಾಕ್ಷಿಯನ್ನು, ಯಾವಾಗ ಹಾಗೂ ಯಾರು ಧರಿಸಬೇಕು ಎಂಬ ಬಗ್ಗೆ ವೇದ ಗಣಿತದ ಮೂಲಕ ಜನ್ಮರಾಶಿ, ನಕ್ಷತ್ರ ಆಧರಿಸಿ ತಿಳಿಸಲಾಗುವುದು. ಅಸಲಿ ಹಾಗೂ ನಕಲಿ ರುದ್ರಾಕ್ಷಿಗಳ ವ್ಯತ್ಯಾಸ ತಿಳಿಸಲಾಗುವುದು. ಆಸಕ್ತರಿಗೆ ಇತರೆ ಮುಖಗಳ ರುದ್ರಾಕ್ಷಿಗಳನ್ನೂ ತರಿಸಿ ಕೊಡಲಾಗುವುದು. ಸಸ್ಯಾಹಾರಿ ಹಾಗೂ ಮಾಂಸಹಾರಿಗಳು ಸಹ ರುದ್ರಾಕ್ಷಿ ಧರಿಸಬಹುದು. ಗುಣಮಟ್ಟದ ರುದ್ರಾಕ್ಷಿಗಳ ಮಾರಾಟದಲ್ಲಿ ನಮ್ಮ ಸಂಸ್ಥೆ ವಿಶ್ವಾಸಾರ್ಹತೆ ಹೊಂದಿದೆ ಎಂದು ಹೇಳಿದ್ದಾರೆ.
ಮಾಹಿತಿಗೆ ನರೇಂದ್ರ ಕಾಶಿರೆಡ್ಡಿ ಮೊ.ಸಂ: 7097296666 ಸಂಪರ್ಕಿಸಬಹುದು.