
ದಾವಣಗೆರೆ: ಬೆಳ್ಳಿ, ಬಂಗಾರದಂತೆ ಅಡಿಕೆ ದರದಲ್ಲಿಯೂ ಏರಿಳಿತ ಆಗುತ್ತಿರುತ್ತಲೇ ಇರುತ್ತದೆ. ಅದರಲ್ಲೂ ಚನ್ನಗಿರಿ, ಹೊನ್ನಾಳಿ, ದಾವಣಗೆರೆ ತಾಲೂಕು ಸೇರಿದಂತೆ ಹಲವೆಡೆಯೂ ಅಡಿಕೆ ಬೆಳೆಯಲಾಗುತ್ತಿದೆ. ಹಾಗಾದ್ರೆ ಇದೀಗ ಜಿಲ್ಲೆಯಲ್ಲಿ ಇಂದು (ಜೂನ್ 3) ಅಡಿಕೆ ಧಾರಣೆ ಎಷ್ಟಿದೆ ಎನ್ನುವ ಮಾಹಿತಿಯನ್ನು ಸಂಪೂರ್ಣವಾಗಿ ಅಂಕಿ ಅಂಶಗಳ ಸಹಿತ ಇಲ್ಲಿ ನೀಡಲಾಗಿದೆ ತಿಳಿಯಿರಿ. ದಾವಣಗೆರೆ ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆ ಅಡಿಕೆ ಆಗಿದೆ.

j3tvkannada
ಕ್ವಿಂಟಾಲ್ ಅಡಿಕೆಯ ಗರಿಷ್ಠ ದರ 59,029 ರೂಪಾಯಿ ಆಗಿದೆ. ಏರಿಕೆತ್ತ ಸಾಗಿದ್ದ ದರ ಮತ್ತೆ ಇದೀಗ ತುಸು ಇಳಿಕೆಯಾಗಿದೆ. ಇದರಿಂದ ಅಡಿಕೆ ಬೆಳೆಗಾರರ ಮುಖದಲ್ಲಿ ಮಂದಹಾಸ ಕಡಿಮೆಯಾಗಿದ್ದು, ಮುಂದಿನ ದಿನಗಳಲ್ಲಿ ಮತ್ತೆ ಏರಿಕೆಯಾಗುವ ನಿರೀಕ್ಷೆಯಲ್ಲಿದ್ದಾರೆ. ಇದೀಗ ಚನ್ನಗಿರಿ ರಾಶಿ ಅಡಿಕೆ ಧಾರಣೆ (ಕ್ವಿಂಟಾಲ್ಗಳಲ್ಲಿ) ಗರಿಷ್ಠ ದರ 59,029 ರೂಪಾಯಿ, ಕನಿಷ್ಠ ದರ 54,329 ರೂಪಾಯಿ ಇದ್ದು, ಸರಾಸರಿ ಬೆಲೆ 57,577 ರೂಪಾಯಿ ಇದೆ.
ಬೆಟ್ಟೆ ಅಡಿಕೆ ಗರಿಷ್ಠ ದರ 31,689 ರೂಪಾಯಿ, ಕನಿಷ್ಠ ದರ 28,889 ರೂಪಾಯಿ, ಸರಾಸರಿ ದರ 30,667 ರೂಪಾಯಿ ಆಗಿದೆ. ಜಿಲ್ಲೆಯ ಚನ್ನಗಿರಿ, ಹೊನ್ನಾಳಿ, ದಾವಣಗೆರೆ, ಹರಿಹರ ತಾಲ್ಲೂಕಿನಲ್ಲಿ ಅಡಿಕೆ ಮುಖ್ಯ ಬೆಳೆಯಾಗಿದೆ. ಇದೇ ವರ್ಷದ ಅಂದರೆ 2025ರ ಜನವರಿ ಕೊನೆಯಲ್ಲಿ 52,000 ರೂಪಾಯಿ ಒಳಗಿದ್ದ ಕ್ವಿಂಟಾಲ್ ಅಡಿಕೆ ದರ ಫೆಬ್ರವರಿಯಲ್ಲಿ ಮತ್ತೆ 53,000 ರೂಪಾಯಿ ಗಡಿ ದಾಟಿತ್ತು. ಆಗಿನಿಂದಲೂ ಸತತವಾಗಿ ಏರಿಕೆಯಾಗುತ್ತಲೇ ಬಂದಿತ್ತು. ಏಪ್ರಿಲ್ ಅಂತ್ಯದಲ್ಲಿ 60,000 ರೂಪಾಯಿ ಗಡಿ ದಾಡಿತ್ತು. ಬಳಿಕ ಮೇ ಕೊನೆವರೆಗೂ ಏರಿಳಿತ ಆಗುತ್ತಲೇ ಇದ್ದು, ಜೂನ್ ಆರಂಭದಲ್ಲಿ ಮತ್ತ ಇಳಿಕೆಯಾಗಿದೆ.

j3tvkannada
ಮುಂದಿನ ದಿನಗಳಲ್ಲಿ ಮತ್ತೆ ಏರಿಕೆಯಾಗುವ ನಿರೀಕ್ಷೆಯಲ್ಲಿ ಅಡಿಕೆ ಬೆಳೆಗಾರರಿದ್ದಾರೆ. 2023ರ ಜುಲೈ ತಿಂಗಳಲ್ಲಿ ಗರಿಷ್ಠ ದರ 57,000 ರೂಪಾಯಿ ಮುಟ್ಟಿತ್ತು. ಕಳೆದ ವರ್ಷ ಅಂದರೆ 2024ರ ಮೇ ತಿಂಗಳಿನಲ್ಲಿ ಗರಿಷ್ಠ 55,000 ರೂಪಾಯಿಗೆ ಬಂದು ತಲುಪಿತ್ತು. ಇದೀಗ 2025ರ ಏಪ್ರಿಲ್ ತಿಂಗಳ ಆರಂಭದಿಂದ ಏರಿಕೆ ಆಗುತ್ತಲೇ ಬಂದಿತ್ತು. ಆದರೆ ಮತ್ತೆ ಮೇ ಆರಂಭದಲ್ಲಿಇಳಿಕೆಯಾಗಿ ಇದೀಗ ಏರಿಕೆಯತ್ತ ಸಾಗಿತ್ತು. ಜೂನ್ನಲ್ಲಿ ತುಸು ಏರಿಳಿ ಆಗುತ್ತಿದ್ದು ಜೂನ್ ಆರಂಭದಲ್ಲಿ ಮತ್ತ ಇಳಿಮುಖದತ್ತ ಸಾಗಿದೆ. ಕಳೆದ ಬಾರಿ ಮುಂಗಾರು ಮಳೆ ಆರ್ಭಟದಿಂದ ಉತ್ತಮ ಫಸಲು ಏನೋ ಬಂದಿತ್ತು. ಇನ್ನು ಈ ಬಾರಿ ಅವಧಿಗೂ ಮುನ್ನ ಮುಂಗಾರು ಎಂಟ್ರಿ ಕೊಟ್ಟಿದೆ. ಈ ಹಿನ್ನೆಲೆ ಉತ್ತಮ ಫಸಲಿನ ಜೊತೆ ಬೆಲೆ ಏರಿಕೆ ಆಗುವ ಭರವಸೆಯಲ್ಲಿ ಅಡಿಕೆ ಬೆಳೆಗಾರರಿದ್ದಾರೆ.
ಮುಂದಿನ ದಿನಗಳಲ್ಲಿ ಮಳೆ ಹೀಗೆ ಮುಂದುವರೆದರೆ ಅಡಿಕೆಯನ್ನು ರಕ್ಷಣೆ ಮಾಡಿಕೊಳ್ಳುವುದು ಹೇಗೆ ಎನ್ನುವ ಆತಂಕದಲ್ಲಿ ಬೆಳೆಗಾರರಿದ್ದಾರೆ. ಸದ್ಯ ಇದೀಗ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮುಂಗಾರು ಮಳೆ ಆರ್ಭಟಿಸುತ್ತಿದ್ದು, ಹಲವೆಡೆ ದೊಡ್ಡ ದೊಡ್ಡ ಅವಾಂತರಗಳೇ ಸೃಷ್ಟಿಯಾಗಿವೆ. ಅದರಲ್ಲೂ ಇನ್ನೂ ಮುಂದಿನ ಹಲವು ದಿನಗಳ ಕಾಲ ಭಾರೀ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.