
ತುಮಕೂರು: ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ, ಗರ್ಭಿಣಿಯಾಗಲು ಕಾರಣನಾಗಿದ್ದ ವ್ಯಕ್ತಿಗೆ ಜೀವಾವಧಿ ಶಿಕ್ಷೆ ವಿಧಿಸಿ ಹೆಚ್ಚುವರಿ ಜಿಲ್ಲಾ ಸೆಷನ್ಸ್ (ಪೋಕ್ರೋ) ನ್ಯಾಯಾಲಯ ಆದೇಶಿಸಿದೆ.

j3tvkannada
ನಗರದ ಮಹಿಳಾ ಪೊಲೀಸ್ ಠಾಣೆ ವ್ಯಾಪ್ತಿಯ ಹೆಬ್ಬೂರು ಹೋಬಳಿಯ ಗುರುಸ್ವಾಮಿ ಎಂಬಾತನಿಗೆ ಜೀವಾವಧಿ ಶಿಕ್ಷೆ ಹಾಗೂ 3 ಲಕ್ಷ ದಂಡ ವಿಧಿಸಲಾಗಿದೆ. ಅಪರಾಧಿಯು ಬಾಲಕಿ ಮನೆಯ ಸಮೀಪವೇ ವಾಸವಿದ್ದು, ಆಕೆ ತಾಯಿಯನ್ನು ದೊಡ್ಡಮ್ಮ ಎಂದು ಕರೆಯುತ್ತಿದ್ದ. ಬಾಲಕಿಯನ್ನು ಪುಸಲಾಯಿಸಿ ಸಾಕಷ್ಟು ಬಾರಿ ಲೈಂಗಿಕ ದೌರ್ಜನ್ಯ ನಡೆಸಿ ಗರ್ಭಿಣಿಯನ್ನಾಗಿ ಮಾಡಿದ್ದ. ಈ ಸಂಬಂಧ 2023 ನವೆಂಬರ್ 11ರಂದು ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿದ ಇನ್ಸ್ಪೆಕ್ಟರ್ ಎಸ್.ವಿಜಯಲಕ್ಷ್ಮಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಪೋಕ್ಷೆ ನ್ಯಾಯಾಲಯದ ನ್ಯಾಯಾಧೀಶರು, ಅಪರಾಧ ಸಾಬೀತಾಗಿದ್ದರಿಂದ ಗುರುಸ್ವಾಮಿಗೆ ಜೀವ ಇರುವವರೆಗೆ ಜೈಲು ಶಿಕ್ಷೆ ವಿಧಿಸಿದ್ದಾರೆ. ಅಪರಾಧಿಗೆ ವಿಧಿಸಿರುವ 3 ಲಕ್ಷ ದಂಡದ ಹಣದ ಜತೆಗೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಿಂದ 10 ಲಕ್ಷ ಪರಿಹಾರ ಸೇರಿ ಒಟ್ಟು 13 ಲಕ್ಷ ಪರಿಹಾರಕ್ಕೆ ಆದೇಶಿಸಿದ್ದಾರೆ.ನೊಂದ ಬಾಲಕಿ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕಿ ಕೆ.ಎಸ್.ಆಶಾ ವಾದ ಮಂಡಿಸಿದ್ದರು.