
ಬಾಗಲಕೋಟೆ : ಪಹಲ್ಗಾಮ್ ದಾಳಿಯ ಬಳಿಕ ಭಾರತ – ಪಾಕಿಸ್ತಾನ ನಡುವೆ ಯುದ್ಧದ ವಾತಾವರಣ ಇದೆ. ಈ ಬಗ್ಗೆ ಸೇನೆ ಮುಖ್ಯಸ್ಥರು ಮಹತ್ವದ ಸಭೆ ನಡೆಸುತ್ತಿದ್ದಾರೆ. ಪಾಕಿಸ್ತಾನದ ವಿರುದ್ಧ ಪ್ರತಿ ತಂತ್ರಕ್ಕೆ ಕೇಂದ್ರ ಸರ್ಕಾರ ಯೋಜನೆಗಳನ್ನು ರೂಪಿಸುತ್ತಿದೆ. ಈ ಬೆನ್ನಲ್ಲೆ ಕೋಡಿ ಶ್ರೀ ಸ್ವಾಮೀಜಿಯವರು ಯುದ್ಧದ ಬಗ್ಗೆ ಬಾಗಲಕೋಟೆಯಲ್ಲಿ ಮಾತನಾಡಿದ್ದಾರೆ.
ಹಿಮಾಲಯದಲ್ಲಿ ಸುನಾಮಿ ಆದೀತು ಅಲ್ಲಿಂದ ಬಂದು ಡೆಲ್ಲಿಗೆ ತಲುಪುತ್ತದೆ. ಇನ್ನು ಅರಸನ ಮನೆಗೆ ಕಾರ್ಮೋಡ ಕವಿದಿತ್ತು ಎಂದು ಕೋಡಿ ಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ (ಕೋಡಿಶ್ರೀ ) ಭವಿಷ್ಯ ನುಡಿದಿದ್ದಾರೆ.

j3tvkannada
ಯುದ್ಧಭೀತಿ ಇದೆ:-
ದೇಶದಲ್ಲಿ ಯುದ್ಧದ ಭೀತಿ ಇದೆ, ಅಲ್ಲಗಳೆಯುವ ಆಗಿಲ್ಲ. ಮತೀಯ ಮತಾಂಧತೆ ಗೊಂದಲ ಬಹಳ ಹೆಚ್ಚಾಗುತ್ತದೆ. ಇನ್ನು ಜನಗಳಲ್ಲಿ ಸಾವು ನೋವುಗಳು ಹೆಚ್ಚಾಗುತ್ತದೆ. ಕಂದಕ ಉಂಟಾಗುತ್ತದೆ. ಅದು ಯಾರಿಗೂ ಶಾಂತಿ ಕೊಡುವಂತ ಪ್ರಸಂಗವಲ್ಲ, ಆದ್ದರಿಂದ ಯುದ್ದದ ಭೀತಿ ಇದೆ ಎಂದು ಹೇಳಿದರು.
ಅರಸನ ಅರಮನೆಗೆ ಕಾರ್ಮೋಡ:-
ರಾಷ್ಟ್ರ ರಾಜಕಾರಣದಲ್ಲಿ ಬದಲಾವಣೆ ಆಗುತ್ತಾ, ಎಂಬ ವಿಚಾರದ ಬಗ್ಗೆ ಮಾತನಾಡಿದ ಸ್ವಾಮೀಜಿ, “ ಅರಸನ ಅರಮನೆಗೆ ಕಾರ್ಮೋಡ ಕವಿದೀತು ” ಎಂದು ಹೇಳಿದ್ದಾರೆ. ಈ ಮೂಲಕ ಕೇಂದ್ರ ಸರ್ಕಾರದಲ್ಲಿ ಮಹತ್ವದ ಬದಲಾವಣೆಯಾಗಲಿದೆ ಎಂದು ಸುಳಿವು ಕೊಟ್ಟಿದ್ದಾರೆ.
ಪಹಲ್ಗಾಮ್ ದಾಳಿ ವಿಚಾರವಾಗಿ ಮಾತನಾಡಿ, ಯುಗಾದಿ ಮುಂಚಿತವಾಗಿ ನಾನು ಹೇಳಿದ್ದೆ. ಉತ್ತರ ನಾಡಿನಲ್ಲಿ ಹಬ್ಬಿತು ಹಗೆಯ ಬೇಗೆ. ಸುತ್ತುವರೆದು ಬರುವಾಗ ಜಗವೆಲ್ಲಾ ಕೊಲ್ಲಲಾದೀತು. ನಾನು ಹೇಳಿದ ಒಂದು ವಾರದಲ್ಲಿ ಕಾಶ್ಮೀರದಲ್ಲಿ ಹಗೆ ಆಯ್ತು ಎಂದು ಸ್ವಾಮೀಜಿ ತಿಳಿಸಿದರು.
ಹಿಮಾಲಯದಲ್ಲಿ ಸುನಾಮಿ:-
ಪ್ರಳಯ ಏನಾದ್ರೂ ಆಗುತ್ತಾ ಎಂಬ ಪ್ರಶ್ನೆಗೆ, ಈ ವರ್ಷ ವಾಯು ಸುನಾಮಿ, ಜಲ ಸುನಾಮಿ, ಭೂ ಸುನಾಮಿ, ಅಗ್ನಿ ಸುನಾಮಿ ಉಂಟಾಗುತ್ತದೆ. ಹಿಮಾಲಯ ಗೌರಿಶಂಕರ ಶಿಖರ ಶಿವ ಶಿವ ಎಂದೀತು. ಹಿಮಾಲಯದಲ್ಲಿ ಸುನಾಮಿ ಆದೀತು ಅಲ್ಲಿಂದ ಬಂದು ದಿಲ್ಲಿಗೆ ತಲುಪುತ್ತದೆ. ಹಿಮಾಲಯ ಸುನಾಮಿಯಿಂದ ಡೆಲ್ಲಿಗೂ ಅಪಾಯವಿದೆ. ಉತ್ತರ ರಾಷ್ಟ್ರಗಳಿಗೆ ಅಪಾಯವಿದೆ, ಜಲಬಾಧೆ ಕೂಡ ಇದೆ ಎಂದು ಹೇಳಿದರು.
ಮಹಾನ್ ನಾಯಕರಿಗೆ ಅಪಾಯ:-
ದೊಡ್ಡ ದೊಡ್ಡ ನಾಯಕರಿಗೆ ಅಪಾಯವಿದೆ. ಜಗತ್ತಿನ ಎರಡು ಮೂರು ಜನ ಮಹಾನ್ ನಾಯಕರಿಗೆ ಅಪಾಯ ಮೃತ್ಯುವಿದೆ. ಟಾಪ್ ಪೊಲಿಟಿಕಲ್ ಪೀಪಲ್ಸ್ ಗೆ ಅಪಾಯ ಮೃತ್ಯುವಿದೆ ಎಂದು ಸ್ವಾಮೀಜಿಗಳು ಭವಿಷ್ಯ ನುಡಿದಿದ್ದಾರೆ.