
ಹುಬ್ಬಳ್ಳಿ: ರೈಲ್ವೆ ಮಂಡಳಿಯು 2025-26ನೇ ಸಾಲಿನಲ್ಲಿ ನೈಋುತ್ಯ ರೈಲ್ವೆಗೆ ವಿವಿಧ ಯೋಜನೆಗಳಿಗಾಗಿ ಅನುದಾನ ಹಂಚಿಕೆ ಪತ್ರ ಬಿಡುಗಡೆ ಮಾಡಿದ್ದು, ಬಜೆಟ್ನಲ್ಲಿ ಘೋಷಿಸಿದ್ದಕ್ಕಿಂತ ಹೆಚ್ಚು ಅನುದಾನ ನೀಡಲಾಗಿದೆ. ಈ ಕುರಿತು ರೈಲ್ವೆ ಮಂಡಳಿಯು ಆಯಾ ವಲಯಗಳಿಗೆ ಆನ್ಲೈನ್ ಮೂಲಕ ಪತ್ರ ಕಳುಹಿಸಿದೆ. ಹೊಸ ಮಾರ್ಗ, ದ್ವಿಪಥ ನಿರ್ಮಾಣ, ವಿದ್ಯುದೀಕರಣ ಹಾಗೂ ಕೋಚ್ಗಳ ಆಧುನೀಕರಣಕ್ಕೆ ಅನುದಾನ ದೊರೆತಿದೆ. ಟ್ರ್ಯಾಕ್ ನವೀಕರಣ ರೈಲ್ವೆ ಆಸ್ತಿಗಳ ಅಭಿವೃದ್ಧಿ ಮೇಲ್ಸೇತುವೆ ಹಾಗೂ ಕೆಳಸೇತುವೆ ನಿರ್ಮಾಣ ಪ್ರಯಾಣಿಕ ಸೌಕರ್ಯಗಳಿಗೂ ಹೆಚ್ಚು ಅನುದಾನ ಮೀಸಲಿಡಲಾಗಿದೆ. ನೈಋುತ್ಯ ರೈಲ್ವೆ ವ್ಯಾಪ್ತಿಯಲ್ಲಿ ವಿದ್ಯುದೀಕರಣ ಯೋಜನೆ ಕಾಮಗಾರಿ ಶೇ.10ರಷ್ಟು ಮಾತ್ರ ಬಾಕಿ ಇದೆ. ಇದಕ್ಕೆ 78 ಕೋಟಿ ರೂ ದೊರೆತಿದೆ.

j3tvkannada
ರೈಲ್ವೆ ಖಾತೆ ಸಹಾಯಕ ಸಚಿವ ವಿ.ಸೋಮಣ್ಣ ಪ್ರತಿನಿಧಿಸುವ ತುಮಕೂರು ಹಾಗೂ ಬೆಂಗಳೂರು ಭಾಗದ ಹೊಸ ಮಾರ್ಗ ಮತ್ತು ಜೋಡಿ ಹಳಿ ನಿರ್ಮಾಣ ಯೋಜನೆಗಳಿಗೆ ಸಿಂಹಪಾಲು ದೊರೆತಿದೆ. ಉತ್ತರ ಕರ್ನಾಟಕ ಭಾಗದ ಬಹು ನಿರೀಕ್ಷಿತ ಗದಗ ಯಲವಿಗಿ ಹೊಸ ಮಾರ್ಗಕ್ಕೆ ನಯಾ ಪೈಸೆ ಕೂಡ ನೀಡಿಲ್ಲ. ಧಾರವಾಡ ಬೆಳಗಾವಿ ಯೋಜನೆಗೆ 27 ಕೋಟಿ ರೂ. ಸಿಕ್ಕಿದೆ. ಫೆ.1ರಂದು ಮಂಡಿಸಿದ್ದ 2025-26ನೇ ಸಾಲಿನ ಬಜೆಟ್ನಲ್ಲಿ ನೈಋುತ್ಯ ರೈಲ್ವೆಗೆ 7,564 ಕೋಟಿ ರೂ ಅನುದಾನ ಘೋಷಿಸಲಾಗಿತ್ತು. ಅದನ್ನು 10,055 ಕೋಟಿ ರೂ ಹೆಚ್ಚಿಸಲಾಗಿದೆ. ಕಳೆದ ವರ್ಷ ಅಂದರೆ 2024-25ನೇ ಸಾಲಿನಲ್ಲಿಯೂ 6,493 ಕೋಟಿ ರೂ ಇದ್ದ ಅನುದಾನವನ್ನು 8,191 ಕೋಟಿ ರೂ.ಗೆ ಹೆಚ್ಚಳ ಮಾಡಲಾಗಿತ್ತು. ಹೊಸ ಲೈನ್ಗೆ 2,429 ಕೋಟಿ ರೂ.
ಪ್ರಮುಖ 12 ಹೊಸ ಲೈನ್ಗಳಿಗೆ ಕಳೆದ 24-25ರಲ್ಲಿ 1,211 ಕೋಟಿ ರೂ. ಒದಗಿಸಿದ್ದರೆ, ಈ ವರ್ಷ ಈ ಮೊತ್ತವು 2,429 ಕೋಟಿ ರೂ. ಹಾಗೂ ದ್ವಿಪಥಕ್ಕೆ 24-25ರಲ್ಲಿ 1,040 ಕೋಟಿ ರೂ. ನೀಡಲಾಗಿತ್ತು. ಈ ಬಾರಿ 1832 ಕೋಟಿ ರೂ.ಗೆ ಹೆಚ್ಚಿಸಿದೆ. ರೈಲ್ವೆ ಮಂಡಳಿಯು ಘೋಷಿಸಿದ್ದಕ್ಕಿಂತಲೂ ಹೆಚ್ಚು ಅನುದಾನವನ್ನು ನೈಋುತ್ಯ ರೈಲ್ವೆಗೆ ನೀಡಿದೆ. ಪ್ರಗತಿ ಹಂತದಲ್ಲಿರುವ ಹೊಸ ಮಾರ್ಗ ನಿರ್ಮಾಣ ಹಾಗೂ ದ್ವಿಪಥ ನಿರ್ಮಾಣಕ್ಕೆ ಹೆಚ್ಚು ಆದ್ಯತೆ ನೀಡಲಾಗಿದೆ ಎಂದಿದ್ದಾರೆ ಡಾ.ಮಂಜುನಾಥ ಕನಮಡಿ, ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ನೈಋುತ್ಯ ರೈಲ್ವೆ ಹುಬ್ಬಳ್ಳಿ.
ಪ್ರಮುಖ ಯೋಜನೆಗಳ ಅನುದಾನ ಮಾಹಿತಿ:
ಯೋಜನೆಗಳು 2024-25 – 2025-26
ಹೊಸ ಮಾರ್ಗ: 1176 – 2429
ದ್ವಿಪಥ ಯೋಜನೆ:1040- 1832
ರೋಲಿಂಗ್ ಸ್ಟಾಕ್: 2411- 1877
ಲೀಸ್ ಅಸೆಟ್ಸ್: 871- 1034
ಕೆಳ ಸೇತುವೆ-ಮೇಲ್ಸೇತುವೆ: 407- 375
ಹಳಿಗಳ ನವೀಕರಣ: 1015 -700
ಸೇತುವೆ ಕಾಮಗಾರಿ: 77 -68
ಸಿಗ್ನಲ್ ಟೆಲಿಪೋನ್ ವಿಭಾಗ: 80- 85
ವಿದ್ಯುದೀಕರಣ ಯೋಜನೆ: 18- 78
ವರ್ಕ್ಶಾಪ್ ವಿಭಾಗ: 97- 310
ಪ್ರಯಾಣಿಕರ ಸೌಲಭ್ಯಗಳು: 655 -449
ಬಾಹ್ಯ ಬಜೆಟ್ ಸಂಪನ್ಮೂಲ: 352 -400
ಹೊಸ ರೈಲ್ವೆ ಮಾರ್ಗಗಳಿಗೆ ಅನುದಾನ:
ಯೋಜನೆಗಳು 2024-25 2025-26
ಗದಗ-ತಳಕಲ್ಲ-ವಾಡಿ: 200- 338.4
ತುಮಕೂರು-ಚಿತ್ರದುರ್ಗ-ದಾವಣಗೆರೆ:150- 338.4
ತುಮಕೂರು-ಕಲ್ಯಾಣದುರ್ಗ-ರಾಯದುರ್ಗ: 250 -609.7
ಬಾಗಲಕೋಟ-ಕುಡಚಿ: 150 -270.7
ಶಿವಮೊಗ್ಗ-ಶಿಕಾರಿಪುರ -ರಾಣೆಬೆನ್ನೂರ: 150 -203
ಬೆಳಗಾವಿ-ಕಿತ್ತೂರು-ಧಾರವಾಡ: 20- 27
ಮಾರಿಕುಪ್ಪಂ -ಕುಪ್ಪಂ: 60- 81.50
ಕಡೂರು-ಚಿಕ್ಕಜಾಜೂರು-ಹಾಸನ: 70- 135.40
ಮಲಗೂರ-ಪಾಲಸಮುದ್ರ: 21 -135.40
ಹುಬ್ಬಳ್ಳಿ-ಅಂಕೋಲಾ: 20- 13.5
ಹಾಸನ-ಶ್ರವಣಬೆಳಗೊಳ-ಬೆಂಗಳೂರು: 20- 27.10
ಮುನಿರಾಬಾದ್-ಮೆಹಬೂಬನಗರ: 100 -203
ಕಡಪ-ಬಂಗಾರಪೇಟೆ-ಬೆಂಗಳೂರು: 20- 45
ದ್ವಿಪಥ ಯೋಜನೆಗೆ ಅನುದಾನ:
ಯೋಜನೆಗಳು 2024-25 – 2025-26
ಗದಗ-ಹೊಟಗಿ: 170 – 245
ಪೆನುಕೊಂಡ-ಧರ್ಮಾವರಂ:100- 155
ಬೈಯಪ್ಪನಹಳ್ಳಿ-ಹೊಸೂರು: 200- 289.60
ಯಶವಂತಪುರ-ಚನ್ನಸಂದ್ರ: 100 -258
ಹುಬ್ಬಳ್ಳಿ-ಚಿಕ್ಕಜಾಜೂರು: 25 -53.85
ಬೆಂಗಳೂರು-ವೈಟ್ಫೀಲ್ಡ್ (4ಲೈನ್): 200- 380
ಹೊಸಪೇಟೆ-ತಿನೈಘಾಟ್-ವಾಸ್ಕೊ: 400- 295
ಯಲಹಂಕ-ಪೆನುಕೊಂಡ: 20- 15
ಅರಸೀಕೆರೆ -ತುಮಕೂರು: 20 -35
ಲೋಂಡಾ-ಮೀರಜ್: 60- 106