
ಶಿವಮೊಗ್ಗ: ಯಾವುದೇ ಜಾತಿ ಬೇಧವಿಲ್ಲದೇ ಎಲ್ಲರಲ್ಲೂ ದೇವರನ್ನು ಕಾಣಬೇಕು. ಶಿವನ ಸ್ಮರಣೆಯಲ್ಲಿ ನಾವೆಲ್ಲಾ ಮುಕ್ತಿ ಕಾಣಬೇಕು ಎಂದು ಹೊನ್ನಾಳಿ ತಾಲ್ಲೂಕು ರಾಂಪುರ ಮಠದ ಶಿವಕುಮಾರ ಹಾಲಸ್ವಾಮೀಜಿ ತಿಳಿಸಿದರು.

j3tvkannada
ತಾಲ್ಲೂಕಿನ ಹಿರೇಮಳಲಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಬಿಸಗ್ನಿ ಸಿದ್ದೇಶ್ವರ, ಮಹಾ ಗಣಪತಿ, ಬಸವೇಶ್ವರ ಹಾಗೂ ಚೌಡೇಶ್ವರಿ ನೂತನ ದೇವಾಲಯಗಳ ಪ್ರವೇಶ ಹಾಗೂ ಕಳಶೋರೋಹಣ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ದೇವಸ್ಥಾನಗಳ ನಿರ್ಮಾಣ ಕಾರ್ಯಗಳು ಹೆಚ್ಚಾಗಿದೆ. ಜನರು ಆಧ್ಯಾತ್ಮದ ಬಗ್ಗೆ ಹೆಚ್ಚು ಒಲವು ಬೆಳೆಸಿಕೊಂಡಿದ್ದಾರೆ. ಅಧ್ಯಾತ್ಮದ ಜತೆಗೆ ಮಕ್ಕಳಿಗೆ ವಿದ್ಯೆ ಕೊಡಿಸುವ ಕಡೆಗೂ ಪಾಲಕರು ಗಮನಹರಿಸಬೇಕು ಎಂದರು.
ಪ್ರಯತ್ನವಿಲ್ಲದೇ ಯಾರೂ ಫಲ ಬಯಸಬಾರದು. ಸಮಾಜದ ಸಣ್ಣ ಸಣ್ಣ ಸಮುದಾಯಗಳು ಪರಿಶ್ರಮದಿಂದ ಮುಂದೆ ಬರಬೇಕು. ಯಾವುದೇ ಸಮಾಜವಿರಲಿ ಶಿಕ್ಷಣಕ್ಕೆ ಹೆಚ್ಚಿನ ಮಹತ್ವವನ್ನು ಕೊಡಬೇಕು ಎಂದು ಹಾವೇರಿ ಜಿಲ್ಲೆಯ ಮಾಜಿ ಶಾಸಕ ನೆಹರು ಓಲೇಕಾರ್ ಹೇಳಿದರು.
ಗ್ರಾಮದ ಮುಖಂಡರಾದ ಶೇಖರಪ್ಪ, ಚನ್ನಬಸಪ್ಪ, ಮೈಲಾರಪ್ಪ, ಮಹಾಂತೇಶ್, ರುದ್ರಪ್ಪ, ರವಿ, ಅಣ್ಣಪ್ಪ, ರುದ್ರೇಶ್, ಗಿರೀಶ್ ಇನ್ನು ಮುಂತಾದವರು ಉಪಸ್ಥಿತರಿದ್ದರು.