

j3tvkannada
ಚಿತ್ರದುರ್ಗ: ಬುಧವಾರ ಪ್ರಕಟವಾದ 10ನೇ ತರಗತಿ ಐ.ಸಿ.ಎಸ್.ಇ ಫಲಿತಾಂಶದಲ್ಲಿ ನಗರದ ಡಾನ್ ಬಾಸ್ಕೊ ಶಾಲೆ ಉತ್ತಮ ಫಲಿತಾಂಶ ಪಡೆದಿದೆ. ಸಿದ್ದಾರ್ಥ ಪಿ. ನಾಡಿಗ್ ಶೇ 95.83, ವಿಕ್ಷೀತಾ ಎನ್ ಶೇ 93.83, ಮಹಮ್ಮದ್ ಮುಸ್ತಫಾ ಕೌಸರ್ ಶೇ 93.66, ಮನ್ವಂತ್ ಎನ್. ಪ್ರಸಾದ್ ಶೇ 93.16 ಫಲಿತಾಂಶದೊಂದಿಗೆ ಶಾಲೆಗೆ ಹಾಗೂ ಪೋಷಕರಿಗೆ ಕೀರ್ತಿ ತಂದಿದ್ದಾರೆ. 84 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಉನ್ನತ ದರ್ಜೆಯಲ್ಲಿ 33, ಪ್ರಥಮ ದರ್ಜೆಯಲ್ಲಿ 47 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. ವಿದ್ಯಾರ್ಥಿಗಳ ಸಾಧನೆಗೆ ಪ್ರಾಂಶುಪಾಲರು, ಶಿಕ್ಷಕರು ಹಾಗೂ ಆಡಳಿತ ಮಂಡಳಿ ಸದಸ್ಯರು ಅಭಿನಂದಿಸಿದ್ದಾರೆ.