
ಸಿರುಗುಪ್ಪದ ಸರ್ಕಾರಿ ಕೈಗಾರಿಕೆ ತರಬೇತಿ ಕಾಲೇಜು (ಐಟಿಐ) ಸ್ಥಾಪನೆಯಾಗಿ 11 ವರ್ಷಗಳಾದರೂ ಸ್ವಂತ ಕಟ್ಟಡವಿಲ್ಲದೆ, ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದ ಗೋದಾಮಿನಲ್ಲಿ ನಡೆಯುತ್ತಿದೆ.

j3tvkannada
2014ರಲ್ಲಿ ಪ್ರಾರಂಭಗೊಂಡ ಕಾಲೇಜಿನಲ್ಲಿ ಎಲೆಕ್ಟ್ರಿಷನ್ ಮತ್ತು ಫಿಟ್ಟರ್ ವಿಭಾಗಗಳಿವೆ. 80 ವಿದ್ಯಾರ್ಥಿಗಳು ಇದ್ದಾರೆ. ಗೋದಾಮಿಗೆ ತಿಂಗಳ ಬಾಡಿಗೆ ರೂಪದಲ್ಲಿ ₹32,990 ನೀಡಲಾಗುತ್ತದೆ. ವಿದ್ಯಾರ್ಥಿಗಳಿಗೆ ಕುಡಿಯುವ ನೀರು, ಶೌಚಾಲಯ ಸೌಲಭ್ಯ ಇಲ್ಲ.ಸರ್ಕಾರದ ಅನುದಾನ ಪಡೆದ ಫಲಾನುಭವಿಗಳಿಗಾಗಿ ಮೂರು ತಿಂಗಳ ವಿಶೇಷ ಕೌಶಲ ತರಬೇತಿ ನಡೆಸಲು ಅವಕಾಶ ಇದೆ. ಆದರೆ ಕಟ್ಟಡವಿಲ್ಲದೇ ಈ ತರಬೇತಿಗಳೂ ನಡೆಯುತ್ತಿಲ್ಲ. ಬೇಡಿಕೆ ಇರುವ ಕೋರ್ಸ್ಗಳಾದ ಡೀಸೆಲ್ ಮೆಕ್ಯಾನಿಕ್, ಕಂಪ್ಯೂಟರ್, 3 ರಿಂದ 6 ತಿಂಗಳ ಮೋಟಾರ್ ರಿವೈಂಡಿಂಗ್, ಫ್ಯಾಷನ್ ಡಿಸೈನಿಂಗ್, ಟೈಲರಿಂಗ್, ಹೊಸ ಹೊಸ ಕೋರ್ಸ್ ಆರಂಭಿಸಲು ಸಾಧ್ಯವಾಗುತ್ತಿಲ್ಲ ಎಂಬುದು ಸಿಬ್ಬಂದಿ ಅಳಲು.ರಾಷ್ಟ್ರೀಯ ಹೆದ್ದಾರಿ 150ಎ ಸಮೀಪದ 64 ಹಳೇಕೋಟೆ ಗ್ರಾಮದಲ್ಲಿ 3 ಎಕರೆ ಜಮೀನನ್ನು ಸಿರುಗುಪ್ಪ ಸರ್ಕಾರಿ ಕೈಗಾರಿಕಾ ತರಬೇತಿ ಕಾಲೇಜು ಕಟ್ಟಡಕ್ಕಾಗಿ 2018ರಲ್ಲಿ ಹಸ್ತಾಂತರಿಸಲಾಗಿದೆ. ಎರಡು ವರ್ಷಗಳಲ್ಲಿ ಕಟ್ಟಡ ನಿರ್ಮಿಸಬೇಕು ಎಂಬ ಷರತ್ತು ವಿಧಿಸಲಾಗಿದ್ದರೂ ಈವರೆಗೆ ಭೂಮಿ ಬಳಕೆ ಆಗಿಲ್ಲ.