
ಭಾರತ ಕ್ರಿಕೆಟ್ ತಂಡದ ರನ್ ಮಷಿನ್ ಖ್ಯಾತಿಯ ವಿರಾಟ್ ಕೊಹ್ಲಿ ಅವರ ಚಿತ್ರವನ್ನು ನಟ ಹಾಗೂ ಡಬ್ಲ್ಯೂಡಬ್ಲ್ಯೂಇ (WWE) ಸ್ಟಾರ್ ಜಾನ್ ಸೀನಾ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

j3tvkannada
ಐಪಿಎಲ್ನಲ್ಲಿ ಆಡುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡದ ಕಾಯಂ ಆಟಗಾರನಾಗಿರುವ ಕೊಹ್ಲಿ ಇತ್ತೀಚೆಗೆ ಚಾಂಪಿಯನ್ ರಿಂಗ್ ತೊಟ್ಟು ಜಾನ್ ಸೀನಾ ಅವರ ಸಿಗ್ನೆಚರ್ ಸ್ಟೈಲ್ ಯು ಕಾಂಟ್ ಸೀ ಮೀ ಪೋಸ್ ನೀಡಿದ್ದರು. ಈ ಉಂಗುರವನ್ನು 2024ರ ಟಿ20 ವಿಶ್ವಕಪ್ ಗೆದ್ದ ಭಾರತ ತಂಡದ ಆಟಗಾರರಿಗೆ ಬಿಸಿಸಿಐ ನೀಡಿತ್ತು.
ಕೊಹ್ಲಿ ಪೋಸ್ ನೀಡಿದ ಸಂದರ್ಭದಲ್ಲಿ ಕ್ಲಿಕ್ಕಿಸಿದ ಚಿತ್ರ ಹಾಗೂ ವಿಡಿಯೊವನ್ನು ಆರ್ಸಿಬಿ ತನ್ನ ಸಾಮಾಜಿಕ ಮಾಧ್ಯಮಗಳ ಖಾತೆಗಳಲ್ಲಿ ಹಂಚಿಕೊಂಡಿದೆ. ಇನ್ಸ್ಟಾಗ್ರಾಂನಲ್ಲಿ ಆರ್ಸಿಬಿ ಹಂಚಿಕೊಂಡಿದ್ದ ಚಿತ್ರವನ್ನು ಸೀನಾ ತಮ್ಮ ಪುಟದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಇದಕ್ಕೆ ಅಭಿಮಾನಿಗಳು ಮೆಚ್ಚುಗೆಯ ಮಹಾಪೂರವನ್ನೇ ಹರಿಸಿದ್ದಾರೆ.