
ಜಾಕಿ ಚಾನ್, ಜೇಡನ್ ಸ್ಮಿತ್ ಅಭಿನಯದ ‘ದಿ ಕರಾಟೆ ಕಿಡ್’ ಎಳೆಯಲ್ಲಿ ‘ವಿದ್ಯಾಪತಿ’ ತೆರೆಗೆ ಬಂದಿದೆ. ‘ಇಕ್ಕಟ್’ ಬಳಿಕ ಇಶಾಂ ಮತ್ತು ಹಸೀಂ ಮತ್ತೊಮ್ಮೆ ನಾಗಭೂಷಣ್ ಗೆ ಆ್ಯಕ್ಷನ್ ಕಟ್ ಹೇಳಿರುವ ಈ ಸಿನಿಮಾದಲ್ಲಿ ಆ್ಯಕ್ಷನ್ ಹೆಚ್ಚು ಇದೆ. ಭಾವನಾತ್ಮಕ ಹಾಗೂ ಹಾಸ್ಯದ ಅಂಶ ಕಥೆಯಲ್ಲಿ ಅಡಕವಾಗಿದೆ. ಆ್ಯಕ್ಷನ್-ಕಾಮಿಡಿ ಎಂಬ ಎರಡು ದೋಣಿಗಳಲ್ಲಿ ಕಾಲಿಟ್ಟಿರುವ ನಾಗಭೂಷಣ್ ಇಕ್ಕಟ್ಟಿಗೆ ಸಿಲುಕದೆ ದಡ ಸೇರಿದ್ದಾರೆ.

j3tvkannada
ಸಿನಿಮಾ ಪಾತ್ರಗಳನ್ನು ನೋಡುವುದಾದರೆ: ನಾಯಕ ಸಿದ್ದುವಿಗೆ (ನಾಗಭೂಷಣ್) ಹಣದ ಹಪಹಪಿ. ಸಿನಿಮಾ ನಾಯಕಿಯಾಗಿರುವ ‘ಸೂಪರ್ಸ್ಟಾರ್ ವಿದ್ಯಾ’ (ಮಲೈಕಾ) ಸಾಮಾನ್ಯ ಜನರಂತೆ ಬದುಕುವಾಕೆ. ತಾನೊಬ್ಬ ಅನಾಥ ಎಂಬಂತೆ ನಾಟಕವಾಡಿ ಸುಳ್ಳಿನ ಸರಮಾಲೆ ಕಟ್ಟಿ ಸಿದ್ದುವಿದ್ಯಾ’ಳ ಮನಸ್ಸು ಗೆದ್ದು ಆಕೆಯನ್ನು ವರಿಸುತ್ತಾನೆ. ನಂತರ ‘ವಿದ್ಯಾ’ಳ ಹಣದಲ್ಲಿ ಐಷಾರಾಮಿ ಜೀವನ ನಡೆಸುತ್ತಿರುತ್ತಾನೆ. ಈ ಸಂದರ್ಭದಲ್ಲಿ ಇವರಿಬ್ಬರ ಜೀವನದ ನಡುವೆ ‘ಜಗ್ಗು’ವಿನ (ಗರುಡಾ ರಾಮ್) ಪ್ರವೇಶವಾಗುತ್ತದೆ. ‘ಸಿದ್ದು’ವಿನ ಮುಖವಾಡ ಕಳಚುತ್ತದೆ. ಆತನ ಜೀವನ ಬದಲಾಗುತ್ತದೆ, ಕಥೆ ಮುಂದುವರಿಯುತ್ತದೆ.