
ಹಾವೇರಿ: ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅನುತ್ತೀರ್ಣಗೊಂಡಿದ್ದಕ್ಕೆ ಬೇಸರಗೊಂಡಿದ್ದರು ಎನ್ನಲಾದ ಕಾವ್ಯಾ ಬಸಪ್ಪ ಲಮಾಣಿ (18) ಎಂಬುವವರು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಸಂಭಂದ ಹಂಸಬಾವಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

j3tvkannada
ಹಿರೇಕೆರೂರ ತಾಲ್ಲೂಕಿನ ಚಿನ್ನಮುಳಗುಂದ ತಾಂಡಾದ ನಿವಾಸಿ ಕಾವ್ಯಾ, ದ್ವಿತೀಯ ಪಿಯುಸಿ ವಿದ್ಯಾರ್ಥಿನಿ. ಅವರ ಸಾವಿನ ಸಂಬಂಧ ಪೋಷಕರು ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಹಂಸಬಾವಿ ಠಾಣೆ ಪೊಲೀಸರು ತಿಳಿಸಿದರು. ವಿಜ್ಞಾನ ವಿಭಾಗದಲ್ಲಿ ಓದುತ್ತಿದ್ದ ವಿದ್ಯಾರ್ಥಿನಿ ಕಾವ್ಯಾ, ನಾಲ್ಕು ವಿಷಯದಲ್ಲಿ ಅನ್ನುತ್ತೀರ್ಣಗೊಂಡಿದ್ದರು. ಫಲಿತಾಂಶ ಬರುತ್ತಿದ್ದಂತೆ ಬೇಸರಗೊಂಡಿದ್ದ ಅವರು, ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಗೊತ್ತಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.