
ಲಂಡನ್:ಬಹು ನಿರೀಕ್ಷಿತ ಮೂರನೇ ಆವೃತ್ತಿಯ ಐಸಿಸಿ ವಿಶ್ವಕಪ್ ಟೆಸ್ಟ್ ಚಾಂಪಿಯನ್ಶಿಪ್ಗೆ(WTC Final 2025) ತೆರೆ ಬೀಳುವ ಹೊತ್ತು ಸಮೀಪಿಸಿದೆ. ಲಂಡನ್ನ ಐತಿಹಾಸಿಕ ಲಾರ್ಡ್ಸ್ ಅಂಗಳದಲ್ಲಿ ಬುಧವಾರ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ(AUS vs SA) ಮತ್ತು ದಕ್ಷಿಣ ಆಫ್ರಿಕಾ ಪ್ರಶಸ್ತಿಗಾಗಿ ಕಾದಾಟ ನಡೆಸಲಿದೆ. ಚೊಚ್ಚಲ ಬಾರಿಗೆ ಫೈನಲ್ ಆಡುತ್ತಿರುವ ಹರಿಣ ಪಡೆ ಈ ಬಾರಿ ಕಾಂಗರೂ ಮೇಲೆ ಗದಾಪ್ರಹಾರ ಮಾಡಲು ಯಶಸ್ವಿಯಾದೀತೇ ಎಂಬುದು ಎಲ್ಲರ ನಿರೀಕ್ಷೆ. ಇನ್ನೊಂದೆಡೆ ಆಸ್ಟ್ರೇಲಿಯಕ್ಕೆ ಇದು ಸತತ ಎರಡನೇ ಫೈನಲ್. ಕಳೆದ ಬಾರಿ ಭಾರತವನ್ನು ಮಣಿಸಿ ಚೊಚ್ಚಲ ಟ್ರೋಫಿ ಗೆದ್ದಿತ್ತು. ಈ ಪಂದ್ಯದ ಪಿಚ್ ರಿಪೋರ್ಟ್, ಹವಾಮಾನ ಮತ್ತು ಸಂಭಾವ್ಯ ಆಡುವ ಬಳಗದ ಮಾಹಿತಿ ಇಲ್ಲಿದೆ.

ಲಾರ್ಡ್ಸ್ ಮೈದಾನದ ಪಿಚ್ ಸಾಮಾನ್ಯವಾಗಿ ಸೀಮರ್ಗಳು ಮತ್ತು ಬ್ಯಾಟರ್ಗಳಿಗೆ ನೆರವು ನೀಡುತ್ತದೆ. ಸೆಪ್ಟೆಂಬರ್ 2024 ರಲ್ಲಿ ಈ ಸ್ಥಳದಲ್ಲಿ ನಡೆದ ಕೊನೆಯ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಬ್ಯಾಟ್ಸ್ಮನ್ ಜೋ ರೂಟ್ ಶತಕ ಬಾರಿಸಿ ಮಿಂಚಿದ್ದರು. ಜೂನ್ 11ರ ಪಂದ್ಯದ ವೇಳೆ ತಾಪಮಾನವು 24 ಸೆಲ್ಸಿಯಸ್ನಿಂದ 25 ರಷ್ಟು ಗರಿಷ್ಠವಾಗಿರುತ್ತದೆ. ದಿನವಿಡೀ ಮಳೆ ಅಥವಾ ಗುಡುಗು ಸಹಿತ ಮಳೆಯಾಗುವ ನಿರೀಕ್ಷೆಯಿಲ್ಲ
ಪಿಚ್ ರಿಪೋರ್ಟ್
ಲಾರ್ಡ್ಸ್ ಮೈದಾನದ ಪಿಚ್ ಸಾಮಾನ್ಯವಾಗಿ ಸೀಮರ್ಗಳು ಮತ್ತು ಬ್ಯಾಟರ್ಗಳಿಗೆ ನೆರವು ನೀಡುತ್ತದೆ. ಸೆಪ್ಟೆಂಬರ್ 2024 ರಲ್ಲಿ ಈ ಸ್ಥಳದಲ್ಲಿ ನಡೆದ ಕೊನೆಯ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಬ್ಯಾಟ್ಸ್ಮನ್ ಜೋ ರೂಟ್ ಶತಕ ಬಾರಿಸಿ ಮಿಂಚಿದ್ದರು. ದಕ್ಷಿಣ ಆಫ್ರಿಕಾ ಇಲ್ಲಿ ಆಡಿರುವ ಏಳು ಟೆಸ್ಟ್ಗಳಲ್ಲಿ ಒಮ್ಮೆ ಮಾತ್ರ ಸೋತಿದೆ. ಇನ್ನೊಂದೆಡೆ ಕಳೆದ 10 ವರ್ಷಗಳಲ್ಲಿ ಆಸ್ಟ್ರೇಲಿಯಾ ಲಾರ್ಡ್ಸ್ನಲ್ಲಿ ಒಮ್ಮೆಯೂ ಸೋತಿಲ್ಲ. ಹೀಗಾಗಿ ಇತ್ತಂಡಗಳ ನಡುವೆ ದೊಡ್ಡ ಮಟ್ಟದ ಹಣಾಹಣಿ ನಿರೀಕ್ಷಿಸಬಹುದು.