
ಭಾರತದ ಕ್ರಿಕೆಟ್ ಪ್ರೇಮಿಗಳು ಒಬ್ಬರನ್ನು ನಂಬಿದರೆ ಅಥವಾ ಯಾರನ್ನೇ ಆದರೂ ಹಚ್ಚಿಕೊಂಡರೆ ಬಿಟ್ಟು ಕೊಡುವ ಪ್ರಶ್ನೆಯೇ ಇಲ್ಲ. ಇನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು(RCB) ಅಭಿಮಾನಿಗಳ ಬಗ್ಗೆ ಹೊಸದಾಗಿ ಹೇಳಬೇಕೆಂದೇನೂ ಇಲ್ಲ. ವಿರಾಟ್ ಕೊಹ್ಲಿ ಅವರನ್ನು ಪಕ್ಕಿಕ್ಕಿಟ್ಟು ನೋಡೋಣ. ವೆಸ್ಟ್ ಇಂಡೀಸ್ ನ ಕ್ರಿಸ್ ಗೇಲ್ ಮತ್ತು ದಕ್ಷಿಣ ಆಫ್ರಿಕಾದ ಎಬಿ ಡಿ ವಿಲಿಯರ್ಸ್ ಅವರನ್ನು ಎಷ್ಟು ಪ್ರೀತಿಸಿದ್ದಾರೆಂಬುದು ಕ್ರಿಕೆಟ್ ವಿಶ್ವಕ್ಕೇ ಗೊತ್ತು. ಇದೀಗ ಆಸ್ಟ್ರೇಲಿಯಾದ ಜೋಶ್ ಹೇಜಲ್ ವುಡ್ ಅವರು ಆರ್ ಸಿಬಿ ಅಭಿಮಾನಿಗಳಿಗೆ ಇನ್ನಿಲದಷ್ಟು ಇಷ್ಟವಾಗಿಬಿಟ್ಟಿದ್ದಾರೆ. ಈ ಬಗ್ಗೆ ಆಸ್ಟ್ರೇಲಿಯಾದ ಆಟಗಾರ ಹೇಳುವುದೇನನ್ನು?ರಾಯಲ್ ಚಾಲೆಂಜರ್ಸ್ ಬೆಂಗಳೂರು(RCB) ಅಭಿಮಾನಿಗಳ ಪ್ರೀತಿಯೇ ಹಾಗೆ, ಹೀಗಾಗಿಯೇ ಅವರ ಹೆಸರನ್ನು ಹಿಂದೂ ಮುಂದೆ ಯೋಚಿಸದೆ ‘ಹೇಜಲ್ಗಾಡ್’ ಎಂದೇ ಅಡ್ಡಹೆಸರು ಇಟ್ಟು ಬಿಟ್ಟಿದ್ದಾರೆ. ಐಪಿಎಲ್ 2025 ರಲ್ಲಿ ಆರ್ಸಿಬಿ ಪರ ಅದ್ಭುತ ಪ್ರದರ್ಶನ ನೀಡಿದ ನಂತರ ಈ ಹೆಸರು ಬಂದಿದೆ.

ಆಸ್ಟ್ರೇಲಿಯಾದಲ್ಲಿ ಇದನ್ನು ಒಬ್ಬೊಬ್ಬರು ಒಂದೊಂದು ರೀತಿ ಸ್ವೀಕರಿಸಿದ್ದಾರೆ. ಮಿಚೆಲ್ ಸ್ಟಾರ್ಕ್ ಈ ಹೆಸರು ಮುಂದುವರಿಯಲಿ ಎಂದು ಬಯಸುತ್ತಾರೆ. ನೇಥನ್ ಲಿಯಾನ್ ಅವರು ಸಹ ಹೇಜಲ್ ಗಾಡ್ ಎಂದೇ ಕರೆಯುತ್ತಿದ್ದಾರೆ. ಆದರೆ ಹೇಜಲ್ವುಡ್ ಮಾತ್ರ ಬೇಗನೆ ಮರೆಯಾಗಲಿ ಎನ್ನುತ್ತಿದ್ದಾರೆ.ರಾಯಲ್ ಚಾಲೆಂಜರ್ಸ್ ಬೆಂಗಳೂರು(RCB) ಅಭಿಮಾನಿಗಳ ಪ್ರೀತಿಯೇ ಹಾಗೆ. ಈ ಬಾರಿ ಆರ್ ಸಿಬಿ ಪರ ಅತಿ ಹೆಚ್ಚು ವಿಕೆಟ್ ಪಡೆದಿರುವ ಜೋಶ್ ಹೇಜಲ್ವುಡ್ ಅವರು ಅಭಿಮಾನಿಗಳಿಗೆ ಇನ್ನಿಲ್ಲದಂತೆ ಇಷ್ಟವಾಗಿಬಿಟ್ಟಿದ್ದಾರೆ. ಹೀಗಾಗಿಯೇ ಅವರ ಹೆಸರನ್ನು ಹಿಂದೂ ಮುಂದೆ ಯೋಚಿಸದೆ ‘ಹೇಜಲ್ಗಾಡ್’ ಎಂದೇ ಅಡ್ಡಹೆಸರು ಇಟ್ಟುಬಿಟ್ಟಿದ್ದಾರೆ. ಐಪಿಎಲ್ 2025 ರಲ್ಲಿ ಆರ್ಸಿಬಿ ಪರ ಅದ್ಭುತ ಪ್ರದರ್ಶನ ನೀಡಿದ ನಂತರ ಈ ಹೆಸರು ಬಂದಿದೆ.

ಆಸ್ಟ್ರೇಲಿಯಾದಲ್ಲಿ ಇದನ್ನು ಒಬ್ಬೊಬ್ಬರು ಒಂದೊಂದು ರೀತಿ ಸ್ವೀಕರಿಸಿದ್ದಾರೆ. ಮಿಚೆಲ್ ಸ್ಟಾರ್ಕ್ ಈ ಹೆಸರು ಮುಂದುವರಿಯಲಿ ಎಂದು ಬಯಸುತ್ತಾರೆ. ನೇಥನ್ ಲಿಯಾನ್ ಅವರು ಸಹ ಹೇಜಲ್ ಗಾಡ್ ಎಂದೇ ಕರೆಯುತ್ತಿದ್ದಾರೆ. ಆದರೆ ಹೇಜಲ್ವುಡ್ ಮಾತ್ರ ಬೇಗನೆ ಮರೆಯಾಗಲಿ ಎನ್ನುತ್ತಿದ್ದಾರೆ.ಇನ್ನು ಅವರ ಗೆಳೆಯ ಮಿಚೆಲ್ ಸ್ಟಾರ್ಕ್ ಅವರು “ಹೇಜಲ್ವುಡ್ ಗೆ ಇದು ಇಷ್ಟವಿಲ್ಲ ಎಂದು ನಾನು ಭಾವಿಸುತ್ತೇನೆ. ಆದ್ದರಿಂದ ಇದು ಮುಂದುವರಿಯಲಿ ಎಂದು ನಾನು ಬಯಸುತ್ತೇನೆ. ಅವನು ಭಾರತದಲ್ಲಿ ಅದ್ಭುತವಾದ ಕೆಲವು ತಿಂಗಳುಗಳನ್ನು ಕಳೆದಿದ್ದಾನೆ. ಸಾಕಷ್ಟು ಹಣದೊಂದಿಗೆ ಮನೆಗೆ ಬಂದಿದ್ದಾನೆ. ಲಾರ್ಡ್ಸ್ನಲ್ಲಿ ಅವನ ಆಟವನ್ನು ನೋಡಲು ನಾನು ಕಾತರದಿಂದ ಕಾಯುತ್ತಿದ್ದೇನೆ.” ಎಂದಿದ್ದಾರೆ. ಸ್ಪಿನ್ನರ್ ನೇಥನ್ ಲಿಯಾನ್ ಹೇಳುವಂತೆ, “ಹೇಜಲ್ಗಾಡ್!- ಅವನು ಮೊನ್ನೆ ತನ್ನನ್ನು ತಾನೇ ಹೀಗೆ ಕರೆದುಕೊಂಡಿದ್ದು ನನಗೆ ಆಶ್ಚರ್ಯವನ್ನುಂಟು ಮಾಡಿತು. IPL ಗೆದ್ದ ನಂತರ, ಅವನು ಆ ಹೆಸರನ್ನು ಗಂಭೀರವಾಗಿ ಪರಿಗಣಿಸುತ್ತಿದ್ದಾನೆ ಎಂದು ನಾನು ಭಾವಿಸುತ್ತೇನೆ.” ಎಂದು ಕಾಲೆಳೆದಿದ್ದಾರೆ.
ಜೂನ್ 11 ರಿಂದ ಕ್ರಿಕೆಟ್ ಕಾಶಿ ಲಾರ್ಡ್ಸ್ ಕ್ರೀಡಾಂಗಣದಲ್ಲಿ ಪ್ರಾರಂಭವಾಗುವ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ನಲ್ಲಿ (WTC) ಫೈನಲ್ನಲ್ಲಿ ಆಸ್ಟ್ರೇಲಿಯಾ ತಂಡವು ದಕ್ಷಿಣ ಆಫ್ರಿಕಾವನ್ನು ಎದುರಿಸಲಿದೆ. ಈ ಪಂದ್ಯದಲ್ಲಿ ಮಿಚೆಲ್ ಸ್ಟಾರ್ಕ್, ನೇಥನ್ ಲಿಯಾನ್ ಮತ್ತು ಜೋಶ್ ಹೇಜಲ್ವುಡ್ ಆಸ್ಟ್ರೇಲಿಯಾ ತಂಡದ ಪ್ರಮುಖ ವೇಗದ ಬೌಲಿಂಗ್ ಅಸ್ತ್ರವಾಗಿದ್ದಾರೆ. ಸ್ಟಾರ್ಕ್ ಮತ್ತು ಹೇಜಲ್ವುಡ್ ತಮ್ಮ ವೇಗದ ಬೌಲಿಂಗ್ನಿಂದ ಎದುರಾಳಿ ಬ್ಯಾಟರ್ ಗಳಿಗೆ ತೊಂದರೆ ನೀಡಿದರೆ, ಲಿಯಾನ್ ಸ್ಪಿನ್ ಬೌಲಿಂಗ್ನಲ್ಲಿ ಪರಿಣತಿ ಹೊಂದಿದ್ದಾರೆ. ಮೂವರು ಆಟಗಾರರು WTC ಫೈನಲ್ನಲ್ಲಿ ಆಸ್ಟ್ರೇಲಿಯಾ ತಂಡದ ಪ್ರಮುಖ ಪಾತ್ರ ವಹಿಸಲಿದ್ದಾರೆ.
ಜೋಶ್ ಹೇಜಲ್ವುಡ್ ಆಸ್ಟ್ರೇಲಿಯಾದ ಪ್ರಮುಖ ವೇಗದ ಬೌಲರ್ ಆಗಿದ್ದಾರೆ. ಅವರು ತಮ್ಮ ನಿಖರವಾದ ಬೌಲಿಂಗ್ನಿಂದ ಹೆಸರುವಾಸಿಯಾಗಿದ್ದಾರೆ. IPLನಲ್ಲಿ RCB ತಂಡಕ್ಕೆ ಸೇರಿಕೊಂಡ ನಂತರ ಅವರ ಜನಪ್ರಿಯತೆ ಹೆಚ್ಚಾಗಿದೆ. ‘ಹೇಜಲ್ಗಾಡ್’ ಎಂಬುದು ಆರ್ ಸಿಬಿ ಅಭಿಮಾನಿಗಳು ನೀಡಿದ ಪ್ರೀತಿಯ ಹೆಸರು. ಆದರೆ ಹೇಜಲ್ವುಡ್ ಮಾತ್ರ ಈ ಹೆಸರು ಬೇಗ ಮರೆತು ಹೋಗಲಿ ಎಂದು ಬಯಸುತ್ತಿದ್ದಾರೆ.