ʻಜೀ ಕನ್ನಡʼ ವಾಹಿನಿಯಲ್ಲಿ ಪ್ರಸಾರವಾದ ʻಮಹಾನಟಿʼ ಸೀಝನ್ 1ನೇ ಶೋ ಬಹಳಷ್ಟು ಜನಪ್ರಿಯತೆಯನ್ನು ಗಳಿಸಿತ್ತು ಹಾಗೂ ಪ್ರೇಕ್ಷಕರ ಗಮನ ಸೆಳೆದಿತ್ತು. ಇದೀಗ ಈ ಶೋನ ಎರಡನೇ ಸೀಸನ್ ಶುರುವಾಗೋದಕ್ಕೆ ರೆಡಿಯಾಗಿದೆ. ಹಾಗಾದರೆ ಈ ಶೋ ಯಾವಾಗ ಶುರು? ಈ ಬಾರಿ ಯಾವೆಲ್ಲಾ ಜಡ್ಜ್ಗಳು ಇರಲಿದ್ದಾರೆ? ಅನ್ನೋದರ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ.

j3tvkannada.in
ನಟಿಯಾಗಬೇಕು, ಸಿನಿಮಾ ಮತ್ತು ಧಾರಾವಾಹಿಗಳಲ್ಲಿ ಮಿಂಚಬೇಕು, ನಾವು ಕೂಡ ಈಗಿರುವ ಟಾಪ್ ನಟಿಯರಂತೆ ಬೆಳೆಯಬೇಕು, ಬಣ್ಣದ ಲೋಕದಲ್ಲಿ ಏನಾದರೂ ಸಾಧನೆ ಮಾಡಬೇಕು ಅಂತ ಹಲವಾರು ಹೆಣ್ಣು ಮಕ್ಕಳು ಕನಸು ಕಟ್ಟಿಕೊಂಡಿರುತ್ತಾರೆ. ಇಂತಹವರಿಗೆ ಜೀ ಕನ್ನಡ ವಾಹಿನಿಯ ʻಮಹಾನಟಿʼ ರಿಯಾಲಿಟಿ ಶೋ ಅತ್ಯುತ್ತಮ ವೇದಿಕೆ. ಮೊದಲ ಸೀಸನ್ ಸಾಕಷ್ಟು ಗಮನ ಸೆಳೆದು, ಸ್ಪರ್ಧಿಗಳು ಈಗಾಗಲೇ ಹಲವು ಸಿನಿಮಾ, ಸೀರಿಯಲ್ ಮತ್ತು ರಿಯಾಲಿಟಿ ಶೋಗಳಲ್ಲಿ ಮಿಂಚುತ್ತಿದ್ದಾರೆ.
ಇತ್ತೀಚೆಗೆ 16 ಜಿಲ್ಲೆಗಳಲ್ಲಿ ʻಮಹಾನಟಿʼ ಶೋಗಾಗಿ ಆಡಿಷನ್ ನಡೆಸಲಾಗಿತ್ತು. 18ರಿಂದ 28 ವರ್ಷದ ಒಳಗಿನ ಯುವತಿಯರು ಈ ಆಡಿಷನ್ನಲ್ಲಿ ಭಾಗವಹಿಸಿದ್ದರು. ಇದೀಗ ʻಮಹಾನಟಿ ಸೀಸನ್ 2’ ಆರಂಭವಾಗಲಿದೆ. ಕಳೆದ ಸೀಸನ್ನಂತೆ ಈ ಸೀಸನ್ನಲ್ಲಿಯೂ ನಟ ರಮೇಶ್ ಅರವಿಂದ್, ನಿಶ್ವಿಕಾ ನಾಯ್ಡು, ಪ್ರೇಮಾ ಹಾಗೂ ನಿರ್ದೇಶಕ ತರುಣ್ ಸುಧೀರ್ ಜಡ್ಜ್ಗಳಾಗಿ ಕಾಣಿಸಿಕೊಳ್ಳಲಿದ್ದಾರೆ. ಈ ಕುರಿತ ಪ್ರೋಮೋ ಇದೀಗ ʻಜೀ ಕನ್ನಡʼ ವಾಹಿನಿಯಲ್ಲಿ ರಿಲೀಸ್ ಆಗಿದ್ದು, “ಹೆಸರಿಟ್ಟಿರೋ ಹೆತ್ತವರ ಹೆಸರನ್ನು ಮುಗಿಲೆತ್ತರಕ್ಕೆ ಏರಿಸೋ ನಟಿಯರನ್ನು ಕೈ ಹಿಡಿದು ನಡೆಸೋ ಮಹಾ ವೇದಿಕೆ” ಎಂಬ ಕ್ಯಾಪ್ಶನ್ ಗಮನ ಸೆಳೆಯುತ್ತಿದೆ.
ಈಗ ಬಿಡುಗಡೆ ಆಗಿರುವ ಪ್ರೋಮೋದಲ್ಲಿ ತಂದೆಯೊಬ್ಬರು ಮಗಳಿಗೆ ಆಕ್ಷನ್ ಹೇಳಿದ್ದಾರೆ. ಮಗಳು, “ಅಪ್ಪ ಭಯ ಆಗುತ್ತಿದೆ ಅಪ್ಪ” ಅಂತಿದ್ದಂತೆ “ಭಯ ಪಡಬೇಡ ಮಗಳೇ, ಇಲ್ಲಿ ಯಾರೂ ಇಲ್ಲ ಅಂದುಕೊಂಡು ಪರ್ಫಾರ್ಮ್ ಮಾಡು. ಆಗಲೇ ಎಲ್ಲರೂ ನಿನ್ನನ್ನು ತಿರುಗಿ ನೋಡ್ತಾರೆ” ಎಂದು ತಮ್ಮ ಮಗಳಿಗೆ ಧೈರ್ಯ ತುಂಬಿದ್ದಾರೆ. ಇದನ್ನು ಕಂಡ ನಿರ್ದೇಶಕ ತರುಣ್ ಸುಧೀರ್, “ನಡೆಯುವುದನ್ನು ಕಲಿಸುವುದಕ್ಕಿಂತ, ಕೈ ಹಿಡಿದು ನಡೆಸುವವನು ಅಪ್ಪ” ಎಂದು ಹೆಮ್ಮೆಯಿಂದ ಹೇಳಿದ್ದಾರೆ.