
ಹಾವೇರಿ: ಭಟ್ಕಳದ ಅಳ್ವೇಕೋಡಿ ಬಂದರಿನಲ್ಲಿ ಅಪರಿಚಿತ ಕಾರೊಂದು ಪತ್ತೆಯಾಗಿದ್ದು, ಸ್ಥಳೀಯರು ಕಾರಿನ ಮಾಲೀಕನ ವಿಳಾಸ ಪತ್ತೆ ಮಾಡಿ ಅವರ ಕುಟುಂಬಕ್ಕೆ ಮಾಹಿತಿ ನೀಡಿದ್ದಾರೆ.

j3tvkannada
ಹಾವೇರಿ ಜಿಲ್ಲೆಯ ರಾಣಿಬೆನ್ನೂರಿನ ನಿವಾಸಿ ನವೀನಕುಮಾರ ಬಸವರಾಜ ಗೋಂಡಕರ್ (34) ಕಾಣೆಯಾದವರು. ಈ ಕುರಿತು ನವೀನಕುಮಾರ ಅವರ ಸಹೋದರ ಸೂರಜ್ ಕುಮಾರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ನವೀನಕುಮಾರ ಮೇ30 ರಂದು ಮನೆಯಿಂದ ಎಲ್ಲಿಗೋ ಹೋಗಿದ್ದರು. ಜೂನ್.2ರಂದು ಸಂಜೆ 7.30 ಸುಮಾರಿಗೆ ಫೋನ್ ಮಾಡಿದಾಗ ಮರುದಿನ ಬರುವುದಾಗಿ ತಿಳಿಸಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ.
ಜೂನ್.3ರಂದು ಭಟ್ಕಳದಿಂದ ಅಪರಿಚಿತರೊಬ್ಬರು ನವೀನಕುಮಾರ ಅತ್ತೆಯ ಮಗ ಗಗನ್ ಅವರ ಮೊಬೈಲ್ ನಂಬರ್ಗೆ ಫೋನ್ ಮಾಡಿ ಅಪರಿಚಿತ ಕಾರು ಅಳ್ಳ್ವೇಕೋಡಿ ಬಂದರಿನಲ್ಲಿ ನಿಂತಿರುವ ಬಗ್ಗೆ ಮಾಹಿತಿ ನೀಡಿದ್ದರು. ಮಾಹಿತಿ ಸಿಕ್ಕ ಕೂಡಲೇ ಭಟ್ಕಳಕ್ಕೆ ಬಂದು ಕಾರು ನಿಂತ ಅಕ್ಕಪಕ್ಕದಲ್ಲಿ ಹುಡುಕಿದರೂ ನವೀನಕುಮಾರ ಸಿಕ್ಕಿಲ್ಲ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಪೊಲೀಸರು ತನಿಖೆ ಆರಂಭಿಸಿದ್ದಾರೆ.