
ಉತ್ತರ ಕನ್ನಡ: ಭಾರತ ಮತ್ತು ಪಾಕಿಸ್ತಾನ ಯುದ್ಧದ ಉದ್ವಿಗ್ನತೆ ನಿರ್ಮಾಣವಾಗಿದೆ. ಉತ್ತರ ಕನ್ನಡ ಜಿಲ್ಲೆಯ ಯೋಧರೊಬ್ಬರು ಸೇನೆಯ ಕರೆಗೆ ಹನಿಮೂನ್ ಮೊಟಕುಗೊಳಿಸಿ ಸೇವೆಗೆ ತೆರಳಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಹೋಸುರು ಗ್ರಾಮದ ಯೋಧ ಜಯವಂತ್ ಅವರು ಮದುವೆಯಾಗಿ 9 ದಿನಕ್ಕೆ ಪತ್ನಿಯನ್ನು ಬಿಟ್ಟು ಯುದ್ದಕ್ಕಾಗಿ ಛತ್ತೀಸಗಡದ ತನ್ನ ಬೆಟಾಲಿಯಬ್ಗೆ ತೆರಳಿದ್ದಾರೆ. ಮೇ 1 ರಂದು ಮದುವೆಯಾಗಿ ಜಯವಂತ್ ದಂಪತಿ ಊಟಿಗೆ ಹನಿಮೂನ್ಗೆ ತೆರಳಿದ್ದರು.

j3tvkannada
ಮೈಸೂರಿನಿಂದ ಊಟಿ ಕಡೆ ಹೊಗುತ್ತಿದ್ದ ಸಂದರ್ಭದಲ್ಲಿ ಸೈನ್ಯದಿಂದ ಕರೆ ಬಂದಿದೆ. ಒಂದು ಕರೆಗೆ ಹನಿಮೂನ್ ಮೊಟಕುಗೊಳಿಸಿ ದೇಶಸೇವೆಗೆ ಹಾಜರಾದ ಯೋಧ ಜಯವಂತ್ ಹಾಜರಾಗಿದ್ದಾರೆ. ಯೋಧ ಜಯವಂತ್ ಸಿ.ಆರ್.ಪಿ.ಎಫ್.ನಲ್ಲಿ ಛತ್ತೀಸಗಡ್ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಯೋಧ ಜಯವಂತ್ ಅವರಿಗೆ ಸನ್ಮಾನ ಮಾಡಿ, ಗೆದ್ದು ಬಾ ಎಂದು ಸಿದ್ದಾಪುರ ಜನತೆ ಹಾರೈಸಿ ಕಳುಹಿಸಿದ್ದಾರೆ.