
ಬಾಗಲಕೋಟೆ: ದೇಶದಲ್ಲಿ ಯುದ್ಧದ ಭೀತಿ ಇದೆ. ಹಿಮಾಲಯದಲ್ಲಿ ಸುನಾಮಿ ಆದೀತು ಅಲ್ಲಿಂದ ಬಂದು ಡೆಲ್ಲಿಗೆ ತಲುಪುತ್ತದೆ. ಇನ್ನು ಅರಸನ ಮನೆಗೆ ಕಾರ್ಮೋಡ ಕವಿದಿತ್ತು ಎಂದು ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ (ಕೋಡಿಶ್ರೀ ) ಭವಿಷ್ಯ ನುಡಿದಿದ್ದಾರೆ. ಪಹಲ್ಗಾಮ್ ದಾಳಿಯ ಬಳಿಕ ಭಾರತ – ಪಾಕಿಸ್ತಾನ ನಡುವೆ ಯುದ್ಧದ ವಾತಾವರಣ ಇದೆ. ಈ ಬಗ್ಗೆ ಸೇನೆ ಮುಖ್ಯಸ್ಥರು ಮಹತ್ವದ ಸಭೆ ನಡೆಸುತ್ತಿವೆ. ಪಾಕಿಸ್ತಾನದ ವಿರುದ್ಧ ಪ್ರತಿ ತಂತ್ರಕ್ಕೆ ಕೇಂದ್ರ ಸರ್ಕಾರ ಯೋಜನೆಗಳನ್ನು ರೂಪಿಸುತ್ತಿದೆ. ಈ ಬೆನ್ನಲ್ಲೆ ಕೋಡಿಶ್ರೀ ಯುದ್ಧದ ಬಗ್ಗೆ ಬಾಗಲಕೋಟೆಯಲ್ಲಿ ಮಾತನಾಡಿದ್ದಾರೆ.

j3tvkannada
ದೇಶದಲ್ಲಿ ಯುದ್ಧದ ಭೀತಿ ಇದೆ, ಅಲ್ಲಗಳೆಯುವ ಆಗಿಲ್ಲ. ಮತೀಯ ಮತಾಂಧತೆ ಗೊಂದಲ ಬಹಳ ಹೆಚ್ಚಾಗುತ್ತದೆ. ಇನ್ನು ಜನಗಳಲ್ಲಿ ಸಾವು ನೋವುಗಳು ಹೆಚ್ಚಾಗುತ್ತದೆ. ಕಂದಕ ಉಂಟಾಗುತ್ತದೆ. ಅದು ಯಾರಿಗೂ ಶಾಂತಿ ಕೊಡುವಂತ ಪ್ರಸಂಗವಲ್ಲ, ಆದ್ದರಿಂದ ಯುದ್ದದ ಭೀತಿ ಇದೆ ಎಂದು ಹೇಳಿದರು. ರಾಷ್ಟ್ರ ರಾಜಕಾರಣದಲ್ಲಿ ಬದಲಾವಣೆ ಆಗುತ್ತಾ ಎಂಬ ವಿಚಾರದ ಬಗ್ಗೆ ಮಾತನಾಡಿದ ಸ್ವಾಮೀಜಿ, ಅರಸನ ಅರಮನೆಗೆ ಕಾರ್ಮೋಡ ಕವಿದೀತು ಎಂದು ಹೇಳಿದ್ದಾರೆ. ಈ ಮೂಲಕ ಕೇಂದ್ರ ಸರ್ಕಾರದಲ್ಲಿ ಮಹತ್ವದ ಬದಲಾವಣೆಯಾಗಲಿದೆ ಎಂದು ಸುಳಿವು ಕೊಟ್ಟಿದ್ದಾರೆ. ಪಹಲ್ಗಾಮ್ ದಾಳಿ ವಿಚಾರವಾಗಿ ಮಾತನಾಡಿ, ಯುಗಾದಿ ಮುಂಚಿತವಾಗಿ ನಾನು ಹೇಳಿದ್ದೆ.
ಉತ್ತರ ನಾಡಿನಲ್ಲಿ ಹಬ್ಬಿತು ಹಗೆಯ ಬೇಗೆ. ಸುತ್ತುವರೆದು ಬರುವಾಗ ಜಗವೆಲ್ಲಾ ಕೊಲ್ಲಲಾದೀತು. ನಾನು ಹೇಳಿದ ಒಂದು ವಾರದಲ್ಲಿ ಕಾಶ್ಮೀರದಲ್ಲಿ ಹಗೆ ಆಯ್ತು, ಮೃತ್ಯ ಆಯ್ತು ಎಂದು ಸ್ವಾಮೀಜಿ ತಿಳಿಸಿದರು. ಮುಂದುವರೆದು ಬಹುದೊಡ್ಡ ಅಪಯಾವಿದೆ, ಈ ವರ್ಷ ಮತಾಂಧತೆ ಹೆಚ್ಚಾಗುತ್ತೆ. ಅದರಿಂದ ಒಂದು ದೊಡ್ಡ ಕಾಯಿಲೆ ಬರುತ್ತೆ, ಅದು 5 ವರ್ಷ ಇರುತ್ತೆ. ಶಾಂತಿ ಇಲ್ಲ, ನೆಮ್ಮದಿ ಇಲ್ಲ ಎಂದು ಸ್ವಾಮೀಜಿ ಹೇಳಿದರು. ಹಾಲು ಕೆಟ್ಟರೂ ಹಾಲುಮತ ಕೆಡುವುದಿಲ್ಲ, ಹೀಗಾಗಿ, ರಾಜ್ಯದಲ್ಲಿ ಸಿ.ಎಂ ಬದಲಾವಣೆ ಸದ್ಯಕ್ಕಿಲ್ಲ ಎಂದು ಸೂಚ್ಯವಾಗಿ ಹೇಳಿದರು. ಸದ್ಯದಲ್ಲಿ ಕರ್ನಾಟಕ ರಾಜಕಾರಣದಲ್ಲಿ ಯಾವುದೇ ಬದಲಾವಣೆ ಇಲ್ಲ. ಸಂಕ್ರಾಂತಿವರೆಗೂ ರಾಜ್ಯ ರಾಜಕೀಯದಲ್ಲಿ ಏನೂ ಬದಲಾವಣೆ ಆಗಲ್ಲ ಎಂದರು.
ಪ್ರಳಯ ಏನಾದ್ರೂ ಆಗುತ್ತಾ ಎಂಬ ಪ್ರಶ್ನೆಗೆ, ಈ ವರ್ಷ ವಾಯು ಸುನಾಮಿ, ಜಲ ಸುನಾಮಿ, ಭೂ ಸುನಾಮಿ, ಅಗ್ನಿ ಸುನಾಮಿ ಉಂಟಾಗುತ್ತದೆ. ಹಿಮಾಲಯ ಗೌರಿಶಂಕರ ಶಿಖರ ಶಿವ ಶಿವ ಎಂದೀತು. ಹಿಮಾಲಯದಲ್ಲಿ ಸುನಾಮಿ ಆದೀತು ಅಲ್ಲಿಂದ ಬಂದು ದಿಲ್ಲಿಗೆ ತಲುಪುತ್ತದೆ. ಹಿಮಾಲಯ ಸುನಾಮಿಯಿಂದ ಡೆಲ್ಲಿಗೂ ಅಪಾಯವಿದೆ. ಉತ್ತರ ರಾಷ್ಟ್ರಗಳಿಗೆ ಅಪಾಯವಿದೆ, ಜಲಬಾಧೆ ಇದೆ ಎಂದು ಹೇಳಿದರು. ದೊಡ್ಡ ದೊಡ್ಡ ನಾಯಕರಿಗೆ ಅಪಾಯವಿದೆ. ಜಗತ್ತಿನ ಎರಡು ಮೂರು ಜನ ಮಹಾನ್ ನಾಯಕರಿಗೆ ಅಪಮೃತ್ಯುವಿದೆ. ಟಾಪ್ ಪೊಲಿಟಿಕಲ್ ಪೀಪಲ್ಸ್ ಗೆ ಅಪಮೃತ್ಯುವಿದೆ ಎಂದ ಸ್ವಾಮೀಜಿಗಳ ಭವಿಷ್ಯ ನುಡಿದಿದ್ದಾರೆ.