
ಬೆಂಗಳೂರು: ಭಾರತ ಸರ್ಕಾರವು ವಂದೇ ಭಾರತ್ ಎಕ್ಸಪ್ರೆಸ್ ರೈಲಿನ ವಿಚಾರದಲ್ಲಿ ಬೆಂಗಳೂರು ಹಾಗೂ ಬೆಳಗಾವಿ ಜನರಿಗೆ ಭರ್ಜರಿ ಗುಡ್ನ್ಯೂಸ್ ನೀಡಿದೆ. ಈ ಭಾಗದಲ್ಲಿ ಹೊಸ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಸಂಚರಿಸಲಿದ್ದು ಈ ಬಗ್ಗೆ ಭರ್ಜರಿ ಗುಡ್ನ್ಯೂಸ್ ನೀಡಲಾಗಿದೆ. ಬೆಂಗಳೂರು ಹಾಗೂ ಬೆಳಗಾವಿ ನಡುವೆ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಸಂಚರಿಸುವ ಬಗ್ಗೆ ಈಚೆಗೆ ಕೇಂದ್ರ ಜಲಶಕ್ತಿ ಹಾಗೂ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಅವರು ಅಪ್ಡೇಟ್ ಕೊಟ್ಟಿದ್ದರು. ಇದೀಗ ವೇಳಾ ಪಟ್ಟಿ ಹಾಗೂ ದರ ಸೇರಿದಂತೆ ಹೊಸ ಅಪ್ಡೇಟ್ಸ್ಗಳು ಬಂದಿವೆ.

j3tvkannada
ಬೆಂಗಳೂರು ಹಾಗೂ ಬೆಳಗಾವಿ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಸಂಚಾರದಿಂದ ಬೆಂಗಳೂರು ಹಾಗೂ ಉತ್ತರ ಕರ್ನಾಟಕದ ನಡುವೆ ಪ್ರಯಾಣಿಸುವ ಪ್ರಯಾಣಿಕರಿಗೆ ಅನುಕೂಲವಾಗಲಿದೆ. ಅಲ್ಲದೇ ಈ ಭಾಗದಲ್ಲಿ ರೈಲಿನಲ್ಲಿ ಪ್ರಯಾಣಿಕರ ದಟ್ಟಣೆ ಕಡಿಮೆಯಾಗಿ ಪ್ರಯಾಣಿಕರು ಸುಗಮವಾಗಿ ಪ್ರಯಾಣ ಮಾಡಲು ಅನುಕೂಲವಾಗಲಿದೆ ಎಂದು ಹೇಳಲಾಗಿದೆ. ಬೆಂಗಳೂರಿನಿಂದ ಬೆಳಗಾವಿಗೆ ಸಂಚರಿಸಲಿರುವ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಕರ್ನಾಟಕದಲ್ಲಿ ರೈಲು ಸಂಪರ್ಕವನ್ನು ಹೆಚ್ಚಿಸಲಿದೆ. ಇದನ್ನು ನೈಋತ್ಯ ರೈಲ್ವೆ ನಿರ್ವಹಣೆ ಮಾಡಲಿದೆ.
ಬೆಂಗಳೂರಿನಿಂದ ಬೆಳಗಾವಿಗೆ ವಂದೇ ಭಾರತ್ ಎಕ್ಸ್ಪ್ರೆಸ್ ರೈಲನ್ನು ವಿಸ್ತರಿಸಬೇಕು ಎಂದು ಮನವಿ ಮಾಡಲಾಗಿತ್ತು. ಈ ವಿಚಾರವಾಗಿ ಈಚೆಗೆ ಮಾತನಾಡಿದ್ದ ವಿ ಸೋಮಣ್ಣ ಅವರು, ಬೆಂಗಳೂರು – ಬೆಳಗಾವಿ ನಡುವೆ ಹೊಸ ರೈಲು ಸಂಚಾರಕ್ಕೆ ಕೇಂದ್ರ ಸರ್ಕಾರವು ಅನುಮತಿ ನೀಡಿದೆ ಎಂದು ತಿಳಿಸಿದ್ದರು. ಇನ್ನು ಈಗ ಕೆ.ಎಸ್.ಆರ್ ಬೆಂಗಳೂರು-ಧಾರವಾಡದ ನಡುವೆ ಈಗಾಗಲೇ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಸಂಚಾರ ಇದೆ. ಇದನ್ನು ಇದೀಗ ಬೆಳಗಾವಿಯ ವರೆಗೆ ವಿಸ್ತರಿಸಲಾಗುತ್ತಿದೆ.

j3tvkannada
ಬೆಂಗಳೂರು- ಬೆಳಗಾವಿ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು 8 ಗಂಟೆಗಳಿಗಿಂತ ಕಡಿಮೆ ಅವಧಿಯಲ್ಲಿ ಬರೋಬ್ಬರಿ 611 ಕಿ.ಮೀ ದೂರವನ್ನು ತಲುಪಲಿದೆ. ಈ ಮೂಲಕ ಪ್ರಯಾಣಿಕರಿಗೆ ಸಮಯವೂ ಉಳಿತಾಯವಾಗಲಿದ್ದು, ಸುಖಕರ ಪ್ರಯಾಣ ಸಿಗಲಿದೆ. ಬೆಂಗಳೂರು ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಸಂಖ್ಯೆ 20661/20662 ಆಗಿರಲಿದೆ. ಈ ರೈಲು ಬೆಂಗಳೂರು ಹಾಗೂ ಬೆಳಗಾವಿಯ ನಡುವೆ ಆರು ಪ್ರಮುಖ ನಿಲ್ದಾಣಗಳಲ್ಲಿ ಸ್ಟಾಪ್ ನೀಡಲಿದೆ. ಈ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಎಲ್ಲೆಲ್ಲಿ ನಿಲುಗಡೆ ನೀಡಲಿದೆ ಎನ್ನುವ ವಿವರ ನೋಡೋಣ.
ಈ ನೂತನ ಎಕ್ಸ್ಪ್ರೆಸ್ ರೈಲು ಬೆಂಗಳೂರಿನಿಂದ ಪ್ರಾರಂಭವಾಗಿ ಬೆಳಗಾವಿ ತಲುಪಲಿದೆ. ಈ ನಡುವೆ ಯಶವಂತಪುರ ಜಂಕ್ಷನ್, ತುಮಕೂರು, ದಾವಣಗೆರೆ, ಮೈಲಾರ ಹಾವೇರಿ, ಎಸ್ಎಸ್ಎಸ್ ಹುಬ್ಬಳ್ಳಿ ಜಂಕ್ಷನ್ ಹಾಗೂ ಧಾರವಾಡದಲ್ಲಿ ನಿಲುಗಡೆ ಇರಲಿದೆ. ಕೆ.ಎಸ್.ಆರ್ ಬೆಂಗಳೂರು-ಬೆಳಗಾವಿ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಮಂಗಳವಾರ ಹೊರತುಪಡಿಸಿ, ಇನ್ನುಳಿದ ಎಲ್ಲಾ ದಿನ ಅಂದರೆ, ವಾರದಲ್ಲಿ ಆರು ದಿನ ಸೇವೆ ನೀಡಲಿದೆ. ಈ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಒಟ್ಟು 8 ಬೋಗಿಗಳನ್ನು ಹೊಂದಿದೆ.
ಅದರಲ್ಲಿ 1 ಎಕ್ಸಿಕ್ಯುಟಿವ್ ಎಸಿ, 7 ಎಸಿ ಚೇರ್ ಕಾರ್ ವಸತಿ ಸೌಲಭ್ಯವೂ ಇರಲಿದೆ. ಬೆಂಗಳೂರಿನಿಂದ ಬೆಳಗಾವಿಗೆ ವಂದೇ ಭಾರತ್ ಎಕ್ಸ್ಪ್ರೆಸ್ನಲ್ಲಿ ಪ್ರಯಾಣಿಸಲು ಎಸಿ ಚೇರ್ ಕಾರ್ಗೆ 1400 ರೂಪಾಯಿ ಹಾಗೂ ಎಕ್ಸಿಕ್ಯುಟಿವ್ ಎಸಿಗೆ 2500 ರೂಪಾಯಿ ಆಗಲಿದೆ ಎಂದು ಅಂದಾಜಿಸಲಾಗಿದೆ. ಬೆಂಗಳೂರಿನಿಂದ ಬೆಳಗಾವಿಗೆ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಕೆ.ಎಸ್.ಆರ್ ಬೆಂಗಳೂರಿನಿಂದ 05:45 ಗಂಟೆಗೆ ಹೊರಡಲಿದ್ದು 13:30 ಗಂಟೆ ವೇಳೆಗೆ ಬೆಳಗಾವಿ ತಲುಪಲಿದೆ. ಹಿಂದಿರುಗುವ ಮಾರ್ಗದಲ್ಲಿ ಬೆಳಗಾವಿಯಿಂದ ಸುಮಾರು 14:30 ಗಂಟೆಗೆ ಪ್ರಯಾಣ ಪ್ರಾರಂಭಿಸಿ, 21:00 ಗಂಟೆಗೆ ಬೆಂಗಳೂರು ತಲುಪುತ್ತದೆ ಎಂದು ಹೇಳಲಾಗಿದೆ.