
ರಾಮನಗರ: ಮಾಗಡಿ ತಾಲ್ಲೂಕಿನ ವೀರೇಗೌಡನದೊಡ್ಡಿ ಮಹದೇವಮ್ಮ ದೇವಿ 13ನೇ ವರ್ಷದ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ನೆರವೇರಿತು.

j3tvkannada
ಜಾತ್ರೆ ಅಂಗವಾಗಿ ಭಾನುವಾರ ಬೆಳಿಗ್ಗೆ ಮಹದೇವಮ್ಮ ಹಾಗೂ ಕಲ್ಲುದೇವನಹಳ್ಳಿ ಮಹದೇಶ್ವರಸ್ವಾಮಿ ಉತ್ಸವ ಮೂರ್ತಿಗಳ ಜೊತೆ ಮಹಿಳೆಯರು ತಂಬಿಟ್ಟಿನ ಆರತಿ ಹೊತ್ತು ಸಾಗಿದರು. ಮೆರವಣಿಗೆಗೆ ವೀರಗಾಸೆ, ನಗಾರಿ, ತಮಟೆ ವಾದ್ಯ ಮೆರಗು ತುಂಬಿದವು.
ದೇವಾಲಯ ಹಾಗೂ ದೇವಿಯನ್ನು ಜಾತ್ರೆ ಅಂಗವಾಗಿ ವಿದ್ಯುತ್ ದೀಪ ಹಾಗೂ ಹೂಗಳಿಂದ ಅಲಂಕರಿಸಲಾಗಿತ್ತು. ತಾಯಿಗೆ ತಂಬಿಟ್ಟಿನ ಆರತಿ ಬೆಳಗಲಾಯಿತು. ಭಕ್ತರು ತಾಯಿಗೆ ಮಡಲಕ್ಕಿ ಅರ್ಪಿಸಿ ತಮ್ಮ ಹರಕೆ ತೀರಿಸಿದರು. ದೇವಸ್ಥಾನದ ವತಿಯಿಂದ ಭಕ್ತರಿಗೆ ಅನ್ನಸಂತರ್ಪಣೆ ನೆರವೇರಿತು.