
ಬೆಳಗಾವಿ: ‘ಇಂಟೆಲ್ ಕಾರ್ಪೊರೇಷನ್’ನ ಮುಖ್ಯ ತಾಂತ್ರಿಕ ಅಧಿಕಾರಿಯಾಗಿ ಹಾಗೂ ಕೃತಕ ಬುದ್ಧಿಮತ್ತೆ ವಿಭಾಗದ ಮುಖ್ಯಸ್ಥರಾಗಿ ಬೆಳಗಾವಿ ಮೂಲದ ಸಚಿನ್ ಕತ್ತಿ ನೇಮಕಗೊಂಡಿದ್ದಾರೆ.

j3tvkannada
ಸಚಿನ್ ಜಿಲ್ಲೆಯ ಹುಕ್ಕೇರಿ ತಾಲ್ಲೂಕಿನ ಬೆಲ್ಲದ ಬಾಗೇವಾಡಿ ಮೂಲದವರು. ಅವರ ತಂದೆ- ತಾಯಿ ವೈದ್ಯರಾಗಿದ್ದು, ಊರಿನಲ್ಲಿಯೇ ಸ್ವಂತ ಆಸ್ಪತ್ರೆ ನಡೆಸುತ್ತಿದ್ದಾರೆ. ಸಚಿನ್ ಪತ್ನಿ ಸೀಮಾ ಕೂಡ ಸಾಫ್ಟ್ವೇರ್ ಎಂಜಿನಿಯರ್. ಸಹೋದರ ಅಮಿತ್ ಹಾಗೂ ಅವರ ಪತ್ನಿ ಕೂಡ ವೈದ್ಯರಾಗಿದ್ದು, ಬೆಳಗಾವಿಯಲ್ಲಿ ವೃತ್ತಿ ಕೈಗೊಂಡಿದ್ದಾರೆ.
ಸಚಿನ್ ಅವರ ಕಿರಿಯ ಸಹೋದರ ಡಾ.ಅಮಿತ್ ಕತ್ತಿ, ಇದು ಸಚಿನ್ ಬುದ್ದಿವಂತಿಕೆ, ಶ್ರಮಕ್ಕೆ ತಂದ ಸ್ಥಾನ. ಆರು ತಿಂಗಳ ಹಿಂದಿನಿಂದಲೂ ನಿರೀಕ್ಷೆ ಇತ್ತು. ಜಾಗತಿಕ ಮಟ್ಟದಲಿ ಸಹೋದರ ಹೆಸರು ಮಾಡಿದ್ದು ಖುಷಿ ತಂದಿದೆ. ಎಂದು ತಿಳಿಸಿದ್ದಾರೆ.
ಇಲ್ಲಿನ ಸೇಂಟ್ ಝೇವಿಯರ್ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ, ಧಾರವಾಡದ ಕೆ.ಇ. ಬೋರ್ಡ್ನಲ್ಲಿ ಪ್ರೌಢಶಿಕ್ಷಣ, ಕರ್ನಾಟಕ ಕಾಲೇಜಿನಲ್ಲಿ ಬಿ.ಎಸ್.ಸಿ, ಮುಂಬೈನ ಐ.ಐ.ಟಿ.ಯಲ್ಲಿ ಬಿ.ಟೆಕ್ ಪದವಿ ಪಡೆದಿದ್ದಾರೆ. 2003ರಿಂದ 2008ರವರೆಗೆ ಅಮೆರಿಕದ ಬೋಸ್ಟನ್ನ ಎಂ.ಐ.ಟಿ ಕಾಲೇಜಿನಲ್ಲಿ ಎಲೆಕ್ಟಿಕಲ್ ಎಂಜಿನಿಯರಿಂಗ್ ಮತ್ತು ಕಂಪ್ಯೂಟರ್ ಸೈನ್ಸಸ್ನಲ್ಲಿ ಎಂ.ಎಸ್ ಮತ್ತು ಪಿ.ಎಚ್.ಡಿ ಪಡೆದಿದ್ದಾರೆ.
ಆರಂಭದಲ್ಲಿ ಸ್ಕ್ಯಾನ್ಫರ್ಡ್ ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿದ್ದರು. ಅದರೊಂದಿಗೇ ‘ಕುಮಾ’ ಹಾಗೂ ‘ಉಹಾನ್’ ಎಂಬ ನೆಟ್ವರ್ಕ್ ಕಂಪನಿಗಳನ್ನು ಆರಂಭಿಸಿದ್ದರು. 2021ರಲ್ಲಿ ಇಂಟೆಲ್ ಕಂಪನಿ ಸೇರಿದ ಸಚಿನ್ ವಿವಿಧ ಹುದ್ದೆಗಳನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ. ಚಿಫ್ ಟೆಕ್ನಾಲಜಿ ಹಾಗೂ ಕೃತಕ ಬುದ್ಧಿಮತ್ತೆ ತಂತ್ರಜ್ಞಾನದಲ್ಲಿ ಅವರದು ಅಸಾಮಾನ್ಯ ಕೌಶಲ ಎಂಬುದು ಅವರ ಸ್ನೇಹಿತರು ನೀಡುವ ಮಾಹಿತಿ.