
ಹಾಸನ: ಜಮ್ಮು ಮತ್ತು ಕಾಶ್ಮೀರ ವಿಭಾಗದಲ್ಲಿ, ಸೇನೆ ಮತ್ತು ಬಿ.ಎಸ್.ಎಫ್. ಎಲ್.ಒ.ಸಿ ಮತ್ತು ಗಡಿಯಲ್ಲಿ ಡ್ರೋನ್ ವಿರೋಧಿ ವ್ಯವಸ್ಥೆಯನ್ನು ಸಕ್ರಿಯಗೊಳಿಸಿವೆ. ಭಾರತ ಹಾಗೂ ಪಾಕಿಸ್ತಾನದ ನಡುವೆ ಯುದ್ಧದ ವಾತಾವರಣ ಸೃಷ್ಟಿಯಾಗಿದೆ. ಉಭಯ ರಾಷ್ಟ್ರಗಳ ನಡುವೆ ಉದ್ವಿಗ್ನತೆ ಹೆಚ್ಚಾಗಿದ್ದು, ಭಾರತದ ಮೇಲೆ ಪಾಕಿಸ್ತಾನ ದಾಳಿ ಯತ್ನಗಳನ್ನು ನಡೆಸುತ್ತಿದೆ. ಗಡಿ ರಾಜ್ಯಗಳಲ್ಲಿ ಪದೇ ಪದೇ ಕದನ ವಿರಾಮ ಉಲ್ಲಂಘಿಸುತ್ತಿರುವ ಪಾಕ್ ಭಾರತದ ಪ್ರದೇಶಗಳ ಮೇಲೆ ದಾಳಿ ನಡೆಸಲು ಮುಂದಾಗಿದೆ. ಈ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ಹಲವು ರಾಜ್ಯಗಳಲ್ಲಿ ಎಲ್ಲಾ ಶಾಲೆಗಳು, ಕಾಲೇಜು, ವಿಶ್ವವಿದ್ಯಾಲಯಗಳಲ್ಲಿ ಮುಂದಿನ ಮೂರು ದಿನಗಳ ಕಾಲ ಅಲ್ಲಿನ ಸರ್ಕಾರಗಳು ರಜೆ ಘೋಷಿಸಿವೆ.

j3tvkannada.in
ಈ ನಡುವೆ ಇದೀಗ ಪಾಕ್ ಹಾಗೂ ಭಾರತದ ನಡುವೆ ಉದ್ವಿಗ್ನ ವಾತಾವರಣ ಹಿನ್ನೆಲೆ ಭಾರತೀಯ ಸೇನೆಗೆ ಬಲ ತುಂಬಲು ಮಾಜಿ ಸೈನಿಕರು ಸಜ್ಜಾಗಿದ್ದಾರೆ. ಹಾಸನದ ಉದಯಗಿರಿ ಬಡಾವಣೆಯಲ್ಲಿರುವ ಸೈನಿಕರ ಭವನದಲ್ಲಿ ತುರ್ತು ಸಭೆ ನಡೆಸಿದ ನಿವೃತ್ತ ಯೋಧರು, ಕರೆ ಬಂದರೆ ಸೇವೆ ಸಲ್ಲಿಸಲು ಸಿದ್ಧ ಎಂದು ಘೋಷಣೆ ಮಾಡಿದ್ದಾರೆ. ಈ ಮೂಲಕ ಯೋಧರು ತಮ್ಮ ದೇಶಭಕ್ತಿಯನ್ನು ತೋರಿಸಿದ್ದಾರೆ. ದೇಶಕ್ಕೆ ತಮ್ಮ ಸೇವೆಯ ಅವಶ್ಯಕಥೆಗಳನ್ನು ತಿಳಿದುಕೊಂಡು ಈ ನಿರ್ಧಾರವನ್ನು ಕೈಗೊಂಡಿದ್ದು ಹೆಮ್ಮೆಯ ವಿಚಾರವಾಗಿದೆ.