
ತುಮಕೂರು(ಗುಬ್ಬಿ): ಕಳೆದ ಅರವತ್ತು ವರ್ಷದ ಇತಿಹಾಸವುಳ್ಳ ತಾಲ್ಲೂಕಿನ ಚಿಕ್ಕ ಚಂಗಾವಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯನ್ನು ಅಭಿವೃದ್ದಿ ಪಡಿಸಿ ಸುತ್ತಲಿನ ಏಳು ಗ್ರಾಮದ ಮಕ್ಕಳಿಗೆ ಶೈಕ್ಷಣಿಕ ಪ್ರಗತಿಗೆ ಸ್ಥಳೀಯ ರೈತ ಸಿ.ಕೆ.ಪ್ರಕಾಶ್ ತಮ್ಮ ವೈಯಕ್ತಿಕ ವೆಚ್ಚದಿಂದ ನೂತನ ಕಟ್ಟಡ ನಿರ್ಮಾಣ ಮಾಡಿ ಇಲಾಖೆಗೆ ಹಸ್ತಾಂತರಿಸಲು ಜೂನ್ 5 ರಂದು ಲೋಕಾರ್ಪಣೆ ಕಾರ್ಯಕ್ರಮವನ್ನು ಆಯೋಜಿಸಿದ್ದಾರೆ.

j3tvkannada
ಚಿಕ್ಕ ಚಂಗಾವಿ ಸುತ್ತಲಿನ ಗ್ರಾಮಗಳಾದ ಬ್ಯಾಟಪ್ಪನಪಾಳ್ಯ, ಬುಕ್ಕಸಾಗರ, ಅಗ್ರಹಾರ ಹೀಗೆ ಅನೇಕ ಗ್ರಾಮದ ಮಕ್ಕಳ ಶಿಕ್ಷಣಕ್ಕೆ ಈ ಭಾಗದಲ್ಲಿ ಇರುವುದೊಂದು ಶಾಲೆ. ಅದೇ ಈ ಚಿಕ್ಕ ಚಂಗಾವಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ. ಈ ನಿಟ್ಟಿನಲ್ಲಿ ಕಳೆದ ವರ್ಷ ಕೊಠಡಿಯ ಕೊರತೆ ಕಂಡು ಸರ್ಕಾರಿ ಅನುದಾನವನ್ನು ಕಾಯದೆ ತಾವೇ ವೈಯಕ್ತಿಕ ಆಸಕ್ತಿ ವಹಿಸಿ ಸಿ.ಕೆ.ಪ್ರಕಾಶ್ ಸುಮಾರು 15 ಲಕ್ಷ ರೂಗಳನ್ನು ವ್ಯಯ ಮಾಡಿ ಅಚ್ಚುಕಟ್ಟಾದ ನೂತನ ದೊಡ್ಡ ಕೊಠಡಿಯನ್ನು ಸುಸಜ್ಜಿತವಾಗಿ ನಿರ್ಮಿಸಿದರು. ಈಗಾಗಲೇ ಸಾವಿರಾರು ಮಕ್ಕಳ ಶಿಕ್ಷಣಕ್ಕೆ ಅಡಿಪಾಯ ಹಾಕಿದ ಈ ಶಾಲೆಯನ್ನು ಉಳಿಸಿ ಬೆಳೆಸುವ ಆಲೋಚನೆಯಲ್ಲಿ ಗ್ರಾಮಸ್ಥರನ್ನು ಸೇರಿಸಿಕೊಂಡು ಕೊಠಡಿ ನಿರ್ಮಿಸಿದ್ದಾರೆ.