

j3tvkannada
ಬಳ್ಳಾರಿ : ಬೇಸಿಗೆಯ ಬಿಸಿ ಜನರ ನೆತ್ತಿ ಸುಡುತ್ತಿದೆ. ಹಲವು ಜಿಲ್ಲೆಗಳಲ್ಲಿ ಕುಡಿಯುವ ನೀರು, ಕೈಗಾರಿಕೆಗಳಿಗೆ ನೀರಿನ ಕೊರತೆ ಎದುರಾಗಿದೆ. ಕರ್ನಾಟಕದಲ್ಲಿ ಜೀನ್ಸ್ ಬಟ್ಟೆಗಳ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ಬಳ್ಳಾರಿಯಲ್ಲಿ ನೀರಿನ ಕೊರತೆ ಜೀನ್ಸ್ ಉದ್ಯಮದ ಮೇಲೆ ಪರಿಣಾಮವನ್ನು ಬೀರಿದೆ. ಸುಮಾರು 100 ಜೀನ್ಸ್ ತಯಾರಿಕಾ ಘಟಕಗಳು ತಾತ್ಕಾಲಿಕವಾಗಿ ಬಾಗಿಲು ಮುಚ್ಚಿವೆ.
ಪ್ರತಿ ಬಾರಿಯ ಬೇಸಿಗೆಯಲ್ಲಿಯೂ ನೀರಿನ ಕೊರತೆ ಬಳ್ಳಾರಿಯ ಜೀನ್ಸ್ ಉದ್ಯಮದ ಮೇಲೆ ಪರಿಣಾಮ ಉಂಟು ಮಾಡುತ್ತಿದೆ. 10 ವರ್ಷಗಳಿಂದಲೂ ಕೈಗಾರಿಕೋದ್ಯಮಿಗಳು ಈ ಸಮಸ್ಯೆ ಬಗೆ ಹರಿಸುವಂತೆ ಹಲವು ಬಾರಿ ಮನವಿ ಸಲ್ಲಿಸಿದ್ದಾರೆ. ಆದರೆ ಪರಿಹಾರ ಮಾತ್ರ ಸಿಕ್ಕಿಲ್ಲ ಎಂದು ಆರೋಪಿಸಲಾಗುತ್ತಿದೆ. ನೀರಿನ ಕೊರತೆಯ ಕಾರಣ ಸುಮಾರು ನೂರು ಜೀನ್ಸ್ ತಯಾರಿಕಾ ಘಟಕಗಳನ್ನು ಬಂದ್ ಮಾಡಲಾಗಿದೆ.

j3tvkannada
ಇದರಿಂದಾಗಿ ನೂರಾರು ಜನರು ನಿರುದ್ಯೋಗಿಗಳಾಗಿದ್ದಾರೆ. ಮಾರ್ಚ್ಗೆ ಹೋಲಿಕೆ ಮಾಡಿದರೆ ಏಪ್ರಿಲ್ ತಿಂಗಳಿನಲ್ಲಿ ನೀರಿನ ಕೊರತೆ ಇನ್ನಷ್ಟು ಹೆಚ್ಚಿದ್ದು, ತಯಾರಿಕಾ ಘಟಕ ಬಂದ್ ಮಾಡದೇ ಬೇರೆ ದಾರಿ ಇಲ್ಲ ಎಂದು ಮಾಲೀಕರು ಹೇಳುತ್ತಿದ್ದಾರೆ. ಕಳೆದ ವರ್ಷ ಜೀನ್ಸ್ ಉದ್ಯಮಕ್ಕೆ ನೀರಿನ ಕೊರತೆ, ವಿದ್ಯುತ್ ಕೊರತೆ ಕಾಡಿತ್ತು. ಆದರೆ ಈ ಬಾರಿ ವಿದ್ಯುತ್ ಪೂರೈಕೆಯಾಗುತ್ತಿದೆ. ಆದರೆ ನೀರಿನ ಕೊರತೆಯ ಕಾರಣ ಘಟಕಕ್ಕೆ ಬೀಗ ಹಾಕಬೇಕಿದೆ.
ಉತ್ತಮ ಮಳೆಯಾಗಿ ಡ್ಯಾಂಗಳು ಭರ್ತಿಯಾಗಿದ್ದರೂ ಸಹ ಬಳ್ಳಾರಿಯಲ್ಲಿ ನೀರಿನ ಕೊರತೆ ಜೀನ್ಸ್ ತಯಾರಿಕಾ ಘಟಕಕ್ಕೆ ತೊಂದರೆ ಉಂಟು ಮಾಡಿದೆ. ಜೀನ್ಸ್ ಉದ್ಯಮಿಗಳ ಪರವಾಗಿ ಹಲವಾರು ಬಾರಿ ನೀರಿನ ಕೊರತೆ ನಿವಾರಣೆ ಮಾಡುವಂತೆ ಮನವಿ ಮಾಡಲಾಗಿದೆ. ಆದರೆ ಪ್ರತಿ ವರ್ಷ ಬೇಸಿಗೆಯಲ್ಲಿ ಇದೇ ಸಮಸ್ಯೆಯನ್ನು ಎದುರಿಸುತ್ತಿದ್ದೇವೆ ಎಂದು ಜೀನ್ಸ್ ತಯಾರಿಕಾ ಘಟಕದವರು ಹೇಳುತ್ತಿದ್ದಾರೆ.