ಮೈಸೂರು: ಆಸ್ತಿ ನೋಂದಣಿಗೆ ಇ-ಖಾತೆ ಕಡ್ಡಾಯ ಎಂಬ ನಿಯಮದಿಂದ ಕಳೆಗುಂದಿದ್ದ ರಿಯಲ್ ಎಸ್ಟೇಟ್ ಚಟುವಟಿಕೆಯು ಮತ್ತೆ ಹಳ್ಳಿಗೆ ಮರಳಿದ್ದು, ಮಾರ್ಚ್ನಲ್ಲಿ ನಿರೀಕ್ಷೆಗೂ ಮೀರಿದ ವಹಿವಾಟು ನಡೆದಿದೆ ಎನ್ನುತ್ತವೆ ಉದ್ಯಮದ ಮೂಲಗಳು.

j3tvkannada
2024ರ ಅಕ್ಟೋಬರ್ 1ರಿಂದ ರಾಜ್ಯ ಸರ್ಕಾರವು ಆಸ್ತಿಗಳ ನೋಂದಣಿಗೆ ಇ-ಖಾತೆಯನ್ನು ಕಡ್ಡಾಯಗೊಳಿಸಿತ್ತು. ಸ್ಥಿರಾಸ್ತಿಗಳ ನೋಂದಣಿಯನ್ನು ಇ-ಆಸ್ತಿ ತಂತ್ರಾಂಶದಿಂದ ಕಡ್ಡಾಯವಾಗಿ ಮಾಹಿತಿ ಪಡೆದು ನೋಂದಾಯಿಸಲು ಆದೇಶಿಸಿತ್ತು. ಸರ್ಕಾರದ ಈ ಕ್ರಮದಿಂದಾಗಿ ಆಸ್ತಿಗಳ ಕೊಡು-ಕೊಳ್ಳುವಿಕೆ ವ್ಯಾಪಾರವು ಕುಸಿದಿದ್ದು, ರಿಯಲ್ ಎಸ್ಟೇಟ್ ಉದ್ಯಮದ ಮಂದಿ ತತ್ತರಿಸಿದ್ದರು. ಮೈಸೂರು ನಗರವೂ ಸೇರಿದಂತೆ ಜಿಲ್ಲೆಯಲ್ಲಿನ ಶೇ 90ರಷ್ಟು ಆಸ್ತಿಗಳಿಗೆ ಇ-ಖಾತೆಯೇ ಇರಲಿಲ್ಲ. ಹೀಗಿರುವಾಗ ಸರ್ಕಾರ ಇ-ಖಾತೆ ಕಡ್ಡಾಯ ನಿಯಮ ಜಾರಿಗೆ ತಂದಿತು.
ನಂತರದಲ್ಲಿ ಅಕ್ಟೋಬರ್ನಿಂದ ಜನವರಿವರೆಗೆ ಆಸ್ತಿಗಳ ನೋಂದಣಿ ಶೇ 50ರಷ್ಟು ಕಡಿಮೆ ಆಗಿತ್ತು ಎನ್ನುತ್ತಾರೆ ರಿಯಲ್ ಎಸ್ಟೇಟ್ ಉದ್ಯಮಿ ಹನುಮಂತು. ಸಾಕಷ್ಟು ಮಂದಿ ಮುಂಗಡ ಹಣ ಕೊಟ್ಟು ಒಪ್ಪಂದ ಮಾಡಿಕೊಂಡು ನೋಂದಣಿಗೆ ಕಾಯುತ್ತಿದ್ದರು. ಆದರೆ ಇ-ಖಾತೆ ಸಿಗದ ಕಾರಣಕ್ಕೆ ನೋಂದಣಿ ಸಾಧ್ಯವಾಗಿರಲಿಲ್ಲ. ಇದೀಗ ಖಾತೆ ವಿತರಣೆ ಚುರುಕಾಗಿದೆ. ನೋಂದಣಿಯೂ ಮತ್ತೆ ವೇಗ ಪಡೆದುಕೊಂಡಿದೆ. ಅದರಲ್ಲೂ ಮಾರ್ಚ್ನಲ್ಲಿ ಹಣಕಾಸು ವರ್ಷದ ಅಂತ್ಯದ ಕಾರಣಕ್ಕೆ ಹೆಚ್ಚು ನೋಂದಣಿ ಆಗಿವೆ ಎನ್ನುತ್ತಾರೆ’ಇ-ಖಾತೆ ವಿಳಂಬವು ರಿಯಲ್ ಎಸ್ಟೇಟ್ ಚಟುವಟಿಕೆ ಮೇಲೆ ಮಾತ್ರ ಪರಿಣಾಮ ಬೀರಿಲ್ಲ. ಬ್ಯಾಂಕುಗಳ ಗೃಹ ಹಾಗೂ ನಿವೇಶನ ಸಾಲ ವಿತರಣೆಯೂ ಕುಸಿದಿತ್ತು.
ಸಾಮಾನ್ಯ ದಿನಗಳಲ್ಲಿ ಒಂದು ವಿಭಾಗದಿಂದ ತಿಂಗಳಿಗೆ ₹8 ಕೋಟಿಯಿಂದ ₹10 ಕೋಟಿ ವ್ಯವಹಾರ ನಡೆದರೆ, ಅಕ್ಟೋಬರ್ನಿಂದ ಒಂದೆರಡು ತಿಂಗಳು ಈ ಪ್ರಮಾಣ ₹4 ಕೋಟಿಯಿಂದ 15 ಕೋಟಿಗೆ ಇಳಿಕೆ ಆಗಿತ್ತು.ಮಾರ್ಚ್ನಲ್ಲಿ ಮೊದಲಿನ ಪ್ರಮಾಣದಲ್ಲೇ ಸಾಲ ನೀಡಿಕೆ ಸಾಧ್ಯವಾಗಿದೆ’ ಎನ್ನುತ್ತಾರೆ ಖಾಸಗಿ ಬ್ಯಾಂಕ್ ಒಂದರ ಗೃಹ ಸಾಲ ವಿಭಾಗದ ವ್ಯವಸ್ಥಾಪಕ ಸುರೇಶ್.’ಇ-ಖಾತೆ ವಿಳಂಬವು ರಿಯಲ್ ಎಸ್ಟೇಟ್ ಚಟುವಟಿಕೆ ಮೇಲೆ ಮಾತ್ರ ಪರಿಣಾಮ ಬೀರಿಲ್ಲ. ಬ್ಯಾಂಕುಗಳ ಗೃಹ ಹಾಗೂ ನಿವೇಶನ ಸಾಲ ವಿತರಣೆಯೂ ಕುಸಿದಿತ್ತು. ಸಾಮಾನ್ಯ ದಿನಗಳಲ್ಲಿ ಒಂದು ವಿಭಾಗದಿಂದ ತಿಂಗಳಿಗೆ ₹8 ಕೋಟಿಯಿಂದ ₹10 ಕೋಟಿ ವ್ಯವಹಾರ ನಡೆದರೆ, ಅಕ್ಟೋಬರ್ನಿಂದ ಒಂದೆರಡು ತಿಂಗಳು ಈ ಪ್ರಮಾಣ ₹4 ಕೋಟಿಯಿಂದ 15 ಕೋಟಿಗೆ ಇಳಿಕೆ ಆಗಿತ್ತು. ಮಾರ್ಚ್ನಲ್ಲಿ ಮೊದಲಿನ ಪ್ರಮಾಣದಲ್ಲೇ ಸಾಲ ನೀಡಿಕೆ ಸಾಧ್ಯವಾಗಿದೆ’ ಎನ್ನುತ್ತಾರೆ ಖಾಸಗಿ ಬ್ಯಾಂಕ್ ಒಂದರ ಗೃಹ ಸಾಲ ವಿಭಾಗದ ವ್ಯವಸ್ಥಾಪಕ ಸುರೇಶ್.