
ಉತ್ತರ ಕನ್ನಡ: ಇಲ್ಲಿನ ಗಾಂಧಿನಗರದಲ್ಲಿನ ಬಾಡಿಗೆ ಮನೆಯೊಂದರಲ್ಲಿ 500 ಮುಖಬೆಲೆಯ ನಕಲಿ ನೋಟುಗಳು ಮತ್ತು ನೋಟು ಎಣಿಕೆ ಯಂತ್ರ ಪತ್ತೆಯಾಗಿವೆ.

j3tvkannada
ಗೋವಾ ಮೂಲದ, ಸದ್ಯ ಹೈದರಾಬಾದ್ನಲ್ಲಿ ಇರುವ ಅರ್ಷದ ಅಂಜುಮ್ ಖಾನ್ ಎಂಬಾತ ಬಾಡಿಗೆ ಪಡೆದಿದ್ದ ಮನೆಯಲ್ಲಿ ಇವು ಸಿಕ್ಕಿವೆ. ಮನೆಯ ಹಿಂಬಾಗಿಲು ಸರಿಯಾಗಿ ಹಾಕಿರದ ಕಾರಣ ನೆರೆ ಮನೆಯ ವ್ಯಕ್ತಿಯೊಬ್ಬರು ಒಳಹೊಕ್ಕು ಪರಿಶೀಲಿಸಿದ ವೇಳೆ ನೋಟುಗಳು ಪತ್ತೆಯಾದವು. ನೋಟುಗಳ ಮೇಲೆ ಚಿತ್ರೀಕರಣದ ಉದ್ದೇಶಕ್ಕೆ ಎಂದು ಮುದ್ರಿತವಾಗಿದೆ. ಬರೀ ಸೊನ್ನೆಯನ್ನೆ ಸರಣಿ ಸಂಖ್ಯೆಗಳಾಗಿ ಬರೆಯಲಾಗಿದೆ. ₹2 ಲಕ್ಷಕ್ಕೂ ಹೆಚ್ಚು ಮೊತ್ತದ ನಕಲಿ ನೋಟುಗಳ ಜೊತೆಗೆ ನೋಟು ಎಣಿಕೆ ಯಂತ್ರ, ನೋಟುಗಳನ್ನು ಪ್ಯಾಕ್ ಮಾಡುವ ಯಂತ್ರವೂ ಸಿಕ್ಕಿದೆ. ಈ ಎಲ್ಲಾ ಕಾರಣದಿಂದ ತನಿಖೆ ನಡೆಸಲಾಗುತ್ತಿದೆ. ಹೈದರಾಬಾದ್ನಲ್ಲಿರುವ ಅರ್ಷದ ಅವರನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದೇವೆ’ ಎಂದು ದಾಂಡೇಲಿ ಠಾಣೆ ಪೊಲೀಸರು ತಿಳಿಸಿದ್ದಾರೆ.