
ಕೋಲಾರ ಜಿಲ್ಲೆಯ 14ರ ಹರೆಯದ ಬಾಲಕಿಯೊಬ್ಬಳು ಗುಜರಾತ್ನ ಸಮುದ್ರದಲ್ಲಿ ಬರೋಬ್ಬರಿ 30 ಕಿ.ಮೀ ಎಲ್ಲಿಯೂ ನಿಲ್ಲದೆ ಈಜಿ ದಾಖಲೆಯೊಂದಿಗೆ ಅಗ್ರಸ್ಥಾನ ಪಡೆದು ಎಲ್ಲರ ಹುಬ್ಬೇರಿಸಿದ್ದಾರೆ.

ಶ್ರೀನಿವಾಸಪುರ ತಾಲ್ಲೂಕಿನ ಕುಪ್ಪಹಳ್ಳಿ ಗ್ರಾಮದ ಡಿಂಪಲ್ ಸೋನಾಕ್ಷಿ ಎಂ.ಗೌಡ ಈ ಸಾಧನೆ ಮಾಡಿದ ಹುಡುಗಿ. ಶಿಕ್ಷಕ ಮತ್ತು ಈಜು ಕೋಚ್ ಮಂಜುನಾಥ್ ಹಾಗೂ ರೂಪಾ ದಂಪತಿ ಪುತ್ರಿ ಡಿಂಪಲ್ ಈಜು ಕ್ರೀಡೆಯಲ್ಲಿ ಮಾಡಿರುವ ಈ ಸಾಧನೆ ದೇಶದ ಮಟ್ಟಿಗೆ ದೊಡ್ಡ ಭರವಸೆ ಮೂಡಿಸಿದೆ. ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. 34ನೇ ವೀರ ಸಾವರ್ಕರ್ ಅಖಿಲ ಭಾರತ ಸಮುದ್ರ ಈಜು ಸ್ಪರ್ಧೆಯಲ್ಲಿ ಗುಜರಾತ್ನ ಅದ್ರಿ ಬೀಚ್ನಿಂದ ವೀರವಾಲ್ ಜೆಟ್ಟಿರವರೆಗೆ 30 ಕಿ.ಮೀ ದೂರವನ್ನು 3 ಗಂಟೆ 33 ನಿಮಿಷ 25 ಸೆಕೆಂಡ್ಗಳಲ್ಲಿ ಈಜಿ ಮೊದಲ ಸ್ಥಾನ ಪಡೆದಿದ್ದಾರೆ. ಈ ಹಿಂದಿನ ದಾಖಲೆಯನ್ನು 3 ಗಂಟೆ 47 ನಿಮಿಷಗಳಲ್ಲಿ ಈಜಿ ನಿರ್ಮಿಸಲಾಗಿತ್ತು. ಈ ಸ್ಪರ್ಧೆಯಲ್ಲಿ ವಿವಿಧ ರಾಜ್ಯಗಳ 16 ಬಾಲಕಿಯರು ಸ್ಪರ್ಧಿಸಿದ್ದರು. ರಾಜ್ಯದಿಂದ ಸ್ಪರ್ಧಿಸಿದ್ದು ನಾನೊಬ್ಬಳೇ. ಸ್ಪರ್ಧಿಗಳಲ್ಲಿ ಎಲ್ಲರಿಗಿಂತ ನಾನೇ ಚಿಕ್ಕವಳು. 13 ನಿಮಿಷ ಬೇಗನೇ ತಲುಪಿ ಹಿಂದಿನ ದಾಖಲೆ ಮುರಿದಿದ್ದೇನೆ. ಮೊದಲ ಸ್ಥಾನ ಪಡೆದಿದ್ದು ತುಂಬಾ ಖುಷಿ ತಂದಿದೆ’ ಎಂದು ಡಿಂಪಲ್ ಪ್ರತಿಕ್ರಿಯಿಸಿದರು.