
ವಿಶೇಷ ಚೇತನರು ನಮಗೆ ಕೆಲಸ ಸಿಗಲ್ಲ ಎಂದು ಇನ್ಮುಂದೆ ಚಿಂತೆ ಮಾಡುವ ಅವಶ್ಯಕತೆ ಇಲ್ಲ. ಕಾರ್ಪೊರೇಟ್ ಕ್ಷೇತ್ರದಲ್ಲಿ ನಿಮಗೂ ಹೆಚ್ಚಿನ ಉದ್ಯೋಗಾವಕಾಶಗಳು ದೊರೆಯಲಿವೆ. ಭಾರತೀಯ ಕಾರ್ಪೊರೇಟ್ ಕಂಪನಿಗಳಲ್ಲಿ ವಿಶೇಷಚೇತನರನ್ನು ನೇಮಕ ಮಾಡಿಕೊಳ್ಳುವ ಪ್ರಮಾಣ ಸ್ಥಿರವಾಗಿ ಏರುತ್ತಿದೆ. ಉಕ್ಕು ಮತ್ತು ಗಣಿಗಾರಿಕೆ ಕ್ಷೇತ್ರಗಳಿಂದ ಹಿಡಿದು ವಿಮಾ ಕ್ಷೇತ್ರದವರೆಗೆ, ಭಾರತೀಯ ಕಂಪನಿಗಳು ತಮ್ಮ ಉದ್ಯೋಗ ಪಟ್ಟಿಯಲ್ಲಿ ವಿಶೇಷಚೇತನರಿಗೆ ಆದ್ಯತೆ ನೀಡುತ್ತಿವೆ. ವಿಶೇಷ ಚೇತನರ ಉದ್ಯೋಗಾವಕಾಶಗಳನ್ನು ಹೆಚ್ಚು ಮಾಡುವುದು ವೈವಿಧ್ಯತೆ, ಸಮಾನತೆ ಮತ್ತು ಸೇರ್ಪಡೆ ಬದ್ಧತೆಗಳನ್ನು ಪೂರೈಸುವುದರ ಜೊತೆಗೆ ಇದು “ಸಾಮಾಜಿಕ ಹೊಣೆಗಾರಿಕೆ” ಮತ್ತು “ವ್ಯಾವಹಾರಿಕ ಲಾಭ” ಎರಡನ್ನೂ ಒದಗಿಸುತ್ತದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಭಾರತೀಯ ಕಾರ್ಪೊರೇಟ್ ಕಂಪನಿಗಳಲ್ಲಿ ಕಳೆದ ಮೂರು ವರ್ಷಗಳಲ್ಲಿ ಬೇರೆ ಬೇರೆ ಪಾತ್ರಗಳಿಗೆ ಉದ್ಯೋಗ ಪೋಸ್ಟಿಂಗ್ಗಳಲ್ಲಿ ಶೇಕಡಾ 30-40 ರಷ್ಟು ಹೆಚ್ಚಳವಾಗಿದೆ ಎಂದು ಹೇಳಿದ್ದಾರೆ.
