
ಕೊಡಗು: ಜಿಲ್ಲೆಯ ಕುಶಾಲನಗರ ತಾಲ್ಲೂಕಿನ ಸುಂಟಿಕೊಪ್ಪ ಸಮೀಪದ ಕಂಬಿಬಾಣೆ ಕಾಲೋನಿ ಯುವಕ ಬೆಂಗಳೂರಿನಲ್ಲಿ ವಾಸವಿದ್ದ ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

j3tvkannada
ಗಗನ್ (21) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಯುವಕ. ಈತ, ಕಂಬಿಬಾಣೆ ಕಾಲೋನಿ ನಿವಾಸಿ ಸುರೇಶ್ ಹಾಗೂ 7 ನೇ ಹೊಸಕೋಟೆ ಗ್ರಾಮ ಪಂಚಾಯಿತಿ ಸದಸ್ಯೆ ಚಂದ್ರಾವತಿ ದಂಪತಿಗಳ ಪುತ್ರ. ಬೆಂಗಳೂರಿನ ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಗಗನ್ ಸೋಷಿಯಲ್ ಮೀಡಿಯಾದಲ್ಲೂ ಆಗಾಗ್ಗೆ ರೀಲ್ಸ್ ಮಾಡುತ್ತಿದ್ದ. ಕಳೆದ ಎರಡು ದಿವಸಗಳಿಂದ ತಾಯಿಗೆ ಕರೆ ಮಾಡಿ ನನಗೆ ಹುಷಾರಿಲ್ಲ, ಬನ್ನಿ ಎಂದು ಪದೇ ಪದೇ ಕರೆದಿದ್ದ. ಹೀಗಾಗಿ ಚಂದ್ರಾವತಿ ಅವರು ನಿನ್ನೆ ರಾತ್ರಿಯೇ ಬೆಂಗಳೂರಿಗೆ ಬಸ್ ಹತ್ತಿದ್ದರು.
ತಾನು ಕೊಡಗಿನಿಂದ ಬರುತ್ತಿರುವ ವಿಷಯವನ್ನು ಕೂಡ ಮಗನಿಗೆ ತಿಳಿಸಿದ್ದರು. ಆದ್ರೆ ಚಂದ್ರಾವತಿ ಅವರು ಬೆಂಗಳೂರು ತಲುಪುವ ಮೊದಲೇ ಪ್ರೀತಿಯ ಪುತ್ರ ಗಗನ್ ನೇಣು ಬಿಗಿದು ಇಹಲೋಕ ತ್ಯಜಿಸಿದ್ದಾನೆ. ಆತ್ಮಹತ್ಯೆಗೆ ನಿಖರ ಕಾರಣ ಏನು ಎಂಬುದು ತಿಳಿದು ಬಂದಿಲ್ಲ.