
ಬಾಗಲಕೋಟೆ: ನಗರದಲ್ಲಿ ಸಂಚಾರಿ ಪೊಲೀಸರು ಸಂಚಾರಿ ನಿಯಮಗಳ ಉಲ್ಲಂಘನೆಗಾಗಿ ದಂಡ ವಸೂಲಿ ಮಾಡುತ್ತಿದ್ದಾರೆ. 2023ರಲ್ಲಿ ₹1.28 ಕೋಟಿ ದಂಡ ವಸೂಲಿ ಮಾಡಿದ್ದರೆ, 2024ರಲ್ಲಿ ₹3.62 ಕೋಟಿ ದಂಡ ವಸೂಲಿ ಮಾಡಿದ್ದಾರೆ. ಆದರೆ, ವಾಹನ ಸವಾರರು, ಪಾದಚಾರಿಗಳಿಗೆ ಸಿಗಬೇಕಾದ ಸೌಲಭ್ಯಗಳತ್ತ ಗಮನ ಹರಿಸುತ್ತಿಲ್ಲ.

j3tvkannada
2023ರಲ್ಲಿ ಹೆಲ್ಮೆಟ್ ಹಾಕದ 3,051 ವಾಹನ ಸವಾರರಿಗೆ 26 ಲಕ್ಷ ದಂಡ ವಿಧಿಸಲಾಗಿದೆ. 2024ರಲ್ಲಿ ಹೆಲ್ಮೆಟ್ ಹಾಕದ 22,556 ವಾಹನ ಸವಾರರಿಗೆ 1.12 ಕೋಟಿ ದಂಡ ಹಾಕಲಾಗಿದೆ. ಈ ವರ್ಷ ಮಾರ್ಚ್ ಅಂತ್ಯದವರೆಗೆ ಈಗಾಗಲೇ 5,407 ಜನ ಹೆಲ್ಮೆಟ್ ಹಾಕದವರಿಗೆ 27 ಲಕ್ಷ ದಂಡ ವಿಧಿಸಲಾಗಿದೆ.
ತ್ರಿಚಕ್ರ ವಾಹನಗಳಲ್ಲಿ ನಿಗದಿಗಿಂತ ಹೆಚ್ಚು ಪ್ರಯಾಣಿಕರನ್ನು ಕರೆದುಕೊಂಡು ಹೋಗುತ್ತಿರುವುದಕ್ಕೆ ಹೆಚ್ಚಿನ ದಂಡ ವಿಧಿಸಲಾಗಿದೆ. ಹೆಚ್ಚಿನ ಪ್ರಯಾಣಿಕರನ್ನು ಕರೆದುಕೊಂಡು ಹೋಗಿದ್ದಕ್ಕಾಗಿ 2023ರಲ್ಲಿ 7,218 ವಾಹನ ಚಾಲಕರಿಗೆ 14.79 ಲಕ್ಷ ದಂಡ ಹಾಕಲಾಗಿದೆ.
ನಾಲ್ಕು ಚಕ್ರ ವಾಹನಗಳಲ್ಲಿಯೂ ಹೆಚ್ಚಿನ ಪ್ರಯಾಣಿಕರನ್ನು ಕರೆದುಕೊಂಡು ಹೋಗಿದ್ದಕ್ಕಾಗಿ 2023ರಲ್ಲಿ 13 ಸಾವಿರ ಪ್ರಕರಣ ದಾಖಲಿಸಿ, 26.57 ಲಕ್ಷ ದಂಡ, 2024ರಲ್ಲಿ 32 ಸಾವಿರ ಪ್ರಕರಣ ದಾಖಲಿಸಿ 76.98 ಲಕ್ಷ ದಂಡ ವಿಧಿಸಲಾಗಿದೆ.
2023ರಲ್ಲಿ ಕೇವಲ 10 ಪ್ರಕರಣಗಳಲ್ಲಿ ಟ್ರ್ಯಾಕ್ಟರ್ ಚಾಲಕರ ವಿರುದ್ಧ ವಿವಿಧ ಪ್ರಕರಣ ದಾಖಲಿಸಿ, 24 ಸಾವಿರ ದಂಡ ವಿಧಿಸಲಾಗಿದೆ. 2023ರಲ್ಲಿ ಲಾರಿ/ಬಸ್ಗಳ ವಿರುದ್ಧ 1,068 ಪ್ರಕರಣಗಳಲ್ಲಿ ₹39 ಲಕ್ಷ ದಂಡ, 2024ರಲ್ಲಿ 3,470 ಪ್ರಕರಣಗಳಲ್ಲಿ ₹59.96 ಲಕ್ಷ ದಂಡ ವಿಧಿಸಲಾಗಿದೆ.2024ರಲ್ಲಿ 70 ಪ್ರಕರಣಗಳಲ್ಲಿ 67 ಸಾವಿರ ದಂಡ ಹಾಕಲಾಗಿದೆ.