
J3Tvkannada.
ಹಂಪಿ:ಇಬ್ಬರು ವಿದೇಶಿ,ಮಹಿಳೆಯರ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿರುವ ಘಟನೆ ಸಣಾಪುರದ,ಸರೋವರದ ಬಳಿ ನಡೆದಿದೆ. ಮಹಿಳೆಯರ ಜೊತೆಗಿದ್ದ ಹೋಂಸ್ಟೇ ಮಾಲೀಕ ಹಾಗೂ ಇಬ್ಬರು ಪುರುಷ ಸಹಚರರ ಮೇಲೆ ದಾಳಿಕೋರರು ಹಲ್ಲೆ ನಡೆಸಿ ನಂತರ ಕಾಲುವೆಗೆ ಎಸೆದಿದ್ದಾರೆ. ಪುರುಷರಲ್ಲಿ ಒಬ್ಬರ ಶವವನ್ನು ಇಂದು ಬೆಳಿಗ್ಗೆ ನೀರಿನಿಂದ ಹೊರ ತೆಗೆಯಲಾಗಿದೆ.ಉಳಿದ ಇಬ್ಬರು ಪುರುಷರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ತನಿಖೆಯ ಪ್ರಕಾರ, ಗುರುವಾರ ರಾತ್ರಿ 11 ರ ಸುಮಾರಿಗೆ, ಹಂಪಿಯಿಂದ 4 ಕಿ.ಮೀ ದೂರದಲ್ಲಿರುವ,ಸಣಾಪುರದ,ಸರೋವರದ ಬಳಿ ಇಸ್ರೇಲ್, ಒಡಿಶಾ, ಅಮೆರಿಕ ಮತ್ತು ಮಹಾರಾಷ್ಟ್ರ ಮೂಲದ ಇಬ್ಬರು ಪುರುಷರು, ಇಬ್ಬರು ಮಹಿಳೆಯರು,ಸೇರಿದಂತೆ ನಾಲ್ವರು ಪ್ರವಾಸಿಗರು ಮತ್ತು ಅವರ ಹೋಂಸ್ಟೇ ಮಾಲೀಕರು ಭೋಜನದ ನಂತರ ನಕ್ಷತ್ರ ವೀಕ್ಷಣೆಗೆಂದು ಸರೋವರದ ಬಳಿ ಹೋಗಿದ್ದರು. ಸರೋವರದ ಬಳಿ ಕುಳಿತು,ಗಿಟಾರ್ ನುಡಿಸುತ್ತಾ,ಸಂಗೀತವನ್ನು ಆನಂದಿಸುತ್ತಿದ್ದರು.
ಆಗ ಅಲ್ಲಿಗೆ ಬೈಕ್ನಲ್ಲಿ ಬಂದ ಮೂವರು ವ್ಯಕ್ತಿಗಳು ಪೆಟ್ರೋಲ್ ಪಂಪ್ಗೆ ಹೋಗುವ ದಾರಿ ಕೇಳುವ ನೆಪದಲ್ಲಿ, ಮಹಿಳೆಯರ ಜೊತೆಗಿದ್ದ ಹೋಂಸ್ಟೇ ಮಾಲೀಕ ಹಾಗೂ ಇಬ್ಬರು ಪುರುಷ ಸಹಚರರ ಮೇಲೆ ಹಲ್ಲೆ ನಡೆಸಿ, ನಂತರ ಕಾಲುವೆಗೆ ಎಸೆದು,ವಿದೇಶಿ ಮಹಿಳೆಯರೊಡನೆ ಅನುಚಿತವಾಗಿ ವರ್ತಿಸಿ ಸಾಮೂಹಿಕ ಅತ್ಯಾಚಾರವೆಸಗಿ, ಮಹಿಳೆಯರ ಬಳಿಯಿದ್ದ ಬ್ಯಾಗ್,ಎರಡು ಮೊಬೈಲ್ ಫೋನ್ಗಳು ಮತ್ತು 9,500 ರೂ.ಗಳನ್ನು ಕಸಿದುಕೊಂಡಿದ್ದಾರೆ. ಪೊಲೀಸರು ದುಷ್ಕರ್ಮಿಗಳಿಗಾಗಿ ತೀವ್ರ ಶೋಧ ನಡೆಸುತ್ತಿದ್ದಾರೆ.