ಬೆಳಗಾವಿ: ಡ್ಯೂಟಿ ಬದಲಿಸಲಿಲ್ಲ ಎಂದು ಕೆ.ಎಸ್.ಆರ್.ಟಿ.ಸಿ ಮೆಕ್ಯಾನಿಕ್ ಬಸ್ನಲ್ಲೇ ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ. ಬೆಳಗಾವಿಯ ಡಿಪೋ 1 ರಲ್ಲಿ ,ಮೆಕ್ಯಾನಿಕ್ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಮೃತ ನೌಕರನನ್ನು ಕೇಶವ ಕಮಡೊಳಿ (57) ಎಂದು ಗುರುತಿಸಲಾಗಿದೆ. ಬೆಳಗಾವಿಯ ಹಳೆ ಗಾಂಧಿ ನಗರದ ನಿವಾಸಿ ಕೇಶವ್, ಬಸ್ ವಾಶಿಂಗ್ನಲ್ಲಿ ಬಸ್ಗಳ ಪಂಚರ್ ತೆಗೆಯುವ ಕೆಲಸ ಮಾಡುತ್ತಿದ್ದರು. ಬೆನ್ನು ನೋವಿದ್ದರೂ ಸಹ ಪಂಚರ್ ತೆಗೆಯುವ ಕೆಲಸವನ್ನು ಅಧಿಕಾರಿಗಳು ನೀಡಿದ್ದರು ಎನ್ನಲಾಗಿದೆ.
ಕೆಲಸದ ಒತ್ತಡ ತಡೆದಕೊಳ್ಳಲಾಗದೇ ಕೇಶವ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದ್ದು, ಅಧಿಕಾರಿಗಳ ವಿರುದ್ಧ ಮೃತ ಕೇಶವ್ ಕುಟುಂಬಸ್ಥರು ಆಕ್ರೋಶ ಹೊರ ಹಾಕಿದ್ದಾರೆ. ಸ್ಥಳಕ್ಕೆ ಬೆಳಗಾವಿ ಮಾರ್ಕೆಟ್ ಪೊಲೀಸ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.