
ಮೈಸೂರು:ಹದ್ದುಬಸ್ತು ಕಟ್ಟಲಾಗಿದ್ದ ರೈತರ ಜಮೀನಿನ ಅಳತೆ ಮಾಡಲು ಹೋಗಿದ್ದ ಸರ್ವೆಯರ್ ಮತ್ತು ಸಹಾಯಕರಿಗೆ ಅಕ್ಕ ಪಕ್ಕದ ಜಮೀನಿನ ರೈತರು ಹಲ್ಲೆ ನಡೆಸಿ ಯಂತ್ರೋಪಕರಣ ಕಿತ್ತುಕೊಂಡ ಘಟನೆ ನಡೆದಿದೆ.

j3tvkannada
ಬೆಟ್ಟದಬೀಡು ಸರ್ವೇ ನಂಬರ್ 31/1 ಮೂರು ಎಕರೆ 20 ಕುಂಟೆ ಕರಿಗೌಡರ ಜಮೀನನ್ನು ಎಚ್.ಡಿ.ಕೋಟೆ ಭೂಮಾಪನ ಇಲಾಖೆಯ ಸರ್ವೆಯರ್ ಅರ್ಜುನ್ ಮತ್ತು ಸಹಾಯಕ ಮಂಜುನಾಥ್ ಎಂಬುವರು ಅಳತೆ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಪಕ್ಕದ ಜಮೀನಿನ ಶಿವಣ್ಣ, ಸೋಮೇಗೌಡ ಮತ್ತು ಸ್ವಾಮಿ ಎಂಬುವವರು ಅಳತೆ ಮಾಡುವ ವಿಚಾರವಾಗಿ ಗಲಾಟೆ ನಡೆಸಿ ಭೂಮಾಪನ ಇಲಾಖೆಯವರ ಮೊಬೈಲ್ ಮತ್ತು ಭೂಮಿ ಅಳತೆ ಮಾಡುವ ಚೈನ್ ಕಿತ್ತುಕೊಂಡು ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.
ಅರ್ಜುನ್ ಮತ್ತು ಮಂಜುನಾಥ್ ಎಚ್.ಡಿ.ಕೋಟೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪಟ್ಟಣದ ಪೊಲೀಸ್ ಠಾಣೆಯಲ್ಲಿ ಮೂವರ ವಿರುದ್ದ ಪ್ರಕರಣ ದಾಖಲಾಗಿದೆ.
ಗಾಯಾಳುಗಳನ್ನು ಎಡಿ.ಎಲ್.ಆರ್ ಬಸವರಾಜು, ಮನೋಹರ್, ರವಿಶಂಕರ್, ಉಮೇಶ್, ಕಾರ್ತಿಕ್, ರಾಕೇಶ್, ಸಿದ್ದೇಶ್, ಶಂಭು, ನಾಗರಾಜು, ಸರ್ಕಾರಿ ನೌಕರ ಸಂಘದ ತಾಲೂಕು ಅಧ್ಯಕ್ಷ ಕೊಡನಹಳ್ಳಿ ಜಗದೀಶ್ ಆರೋಗ್ಯ ವಿಚಾರಿಸಿದರು.