
ರಾಮನಗರ: ರಾಜ್ಯದಲ್ಲಿ ಮೇ 5ರಿಂದ ನಡೆಯುವ ಮೂರು ಹಂತದ ಜಾತಿ ಸಮೀಕ್ಷೆಯಲ್ಲಿ ಪರಿಶಿಷ್ಟರು ನಿರ್ದಿಷ್ಟವಾಗಿ ಹೊಲೆಯ, ಬಲಗೈ, ಛಲವಾದಿ ಎಂದು ನಮೂದಿಸಲು ಸಮುದಾಯ ಮುಖಂಡರು ಒಮ್ಮತದ ನಿರ್ಣಯ ಕೈಗೊಂಡಿದ್ದಾರೆ.

j3tvkannada
ಒಳ ಮೀಸಲಾತಿ ಜಾತಿಗಣತಿ ಸಂಬಂಧ ಪಟ್ಟಣದಲ್ಲಿ ನಡೆದ ಹೊಲೆಯ, ಬಲಗೈ ಮುಖಂಡರ ಸಮಾಲೋಚನಾ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು. ಬೆಂಗಳೂರು ವಿಶ್ವವಿದ್ಯಾಲಯದ ಸಿಂಡಿಕೇಟ್ ಮಾಜಿ ಸದಸ್ಯ ಶಿವಣ್ಣ ವಿಷಯ ಮಂಡಿಸಿದರು. ತಾಲ್ಲೂಕು ಮುಖಂಡರು ಆ ಬಗ್ಗೆ ಚರ್ಚೆ ನಡೆಸಿದರು.
ಜಾತಿ ಸಮೀಕ್ಷೆ ವೇಳೆ ತಾಲ್ಲೂಕಿನ ಜಾತಿ ಬಾಂಧವರು ನಿರ್ದಿಷ್ಟವಾಗಿ ‘ಹೊಲಯ/ಬಲಗೈ/ಛಲವಾದಿ’ ಎಂದು ನಮೂದಿಸಬೇಕು ಎಂದು ಕರೆ ನೀಡಿದರು. ಈ ಕುರಿತು ಪ್ರತಿ ಗ್ರಾಮದಲ್ಲಿ ಜಾಗೃತಿ ಮೂಡಿಸುವ ನಿರ್ಣಯ ತೆಗೆದುಕೊಳ್ಳಲಾಯಿತು. ನಮ್ಮ ಜನಾಂಗದವರು ತಾಲ್ಲೂಕಿನಲ್ಲಿ ಎಷ್ಟು ಸಂಖ್ಯೆಯಲ್ಲಿ ಇದ್ದಾರೆ ಎಂಬುದು ಸ್ಪಷ್ಟವಾಗಿ ತಿಳಿಯಲಿದೆ. ಜತೆಗೆ ಸರ್ಕಾರದಿಂದ ಮೀಸಲಾತಿ ಪಡೆಯಲು ಸಾಧ್ಯ ಎಂದು ಮುಖಂಡರು ಹೇಳಿದರು.