ಲಕ್ನೋ: ಮೊದಲು ಬ್ಯಾಟ್ ಬೀಸಿದ ಯು.ಪಿ ವಾರಿಯರ್ಸ್ 20 ಓವರ್ಗಳಲ್ಲಿ ತನ್ನೆಲ್ಲ ವಿಕೆಟ್ ಕಳೆದುಕೊಂಡು 150 ರನ್ ಕಲೆ ಹಾಕಿತು. ಈ ಗುರಿಯನ್ನು ಬೆನ್ನಟ್ಟಿದ ಮುಂಬೈ ಇಂಡಿಯನ್ಸ್ 18.3 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು 153 ರನ್ ಕಲೆ ಹಾಕಿ ಜಯ ಮುಡಿಗೇರಿಸಿಕೊಂಡಿತು. ಯು.ಪಿ ವಾರಿಯರ್ಸ್ ತಂಡದ ವಿರುದ್ಧ ಅಟಲ್ ಬಿಹಾರಿ ವಾಜಪೇಯಿ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ 6 ವಿಕೆಟ್ಗಳ ಜಯ ಸಾಧಿಸಿದೆ.

4 ಜಯ ಸಾಧಿಸುವುದರೊಂದಿಗೆ ಮುಂಬೈ ಇಂಡಿಯನ್ಸ್ 8 ಅಂಕ ಪಡೆಯುವುದರ ಮೂಲಕ ಅಂಕ ಪಟ್ಟಿಯಲ್ಲಿ ಎರಡನೇ ಸ್ಥಾನಲ್ಲಿದ್ದರೆ ಯು.ಪಿ ವಾರಿಯರ್ಸ್ 5 ಪಂದ್ಯ ಸೋಲುವ ಮೂಲಕ 4 ಅಂಕ ಸಂಪಾದಿಸಿ 5ನೇ ಸ್ಥಾನದಲ್ಲಿದೆ. ಮುಂಬೈ ಇಂಡಿಯನ್ಸ್ ಪರ ಹೇಲಿ ಮ್ಯಾಥ್ಯೂಸ್ 46 ಎಸೆತಗಳಲ್ಲಿ 2 ಸಿಕ್ಸರ್, 8 ಬೌಂಡರಿ ನೆರವಿನಿಂದ 68 ರನ್, ನ್ಯಾಟ್ ಸಿವರ್ ಬ್ರಂಟ್ 23 ಎಸೆತಗಳಲ್ಲಿ 7 ಬೌಂಡರಿಗಳ ನೆರವಿನಿಂದ 37 ರನ್ ಕಲೆ ಹಾಕಿದರು.
ಯು.ಪಿ ಪರ ಗ್ರೇಸ್ ಹ್ಯಾರಿಸ್ 2 ವಿಕೆಟ್, ಕ್ರಾಂತಿ ಗೌಡ್ 1 ವಿಕೆಟ್, ಚಿನೆಲ್ಲೆ ಹೆನ್ರಿ 1 ವಿಕೆಟ್ ಪಡೆದರು. ಯು.ಪಿ ಪರ ಜಾರ್ಜಿಯಾ ವೋಲ್ 33 ಎಸೆತಗಳಲ್ಲಿ 12 ಬೌಂಡರಿಗಳ ನೆರವಿನಿಂದ 55 ರನ್, ಗ್ರೇಸ್ ಹ್ಯಾರಿಸ್ 25 ಎಸೆತಗಳಲ್ಲಿ 1 ಸಿಕ್ಸರ್, 3 ಬೌಂಡರಿ ನೆರವಿನಿಂದ 28 ರನ್, ತಂಡದ ನಾಯಕಿ ದೀಪ್ತಿ ಶರ್ಮಾ 25 ಎಸೆತಗಳಲ್ಲಿ ಒಂದು ಬೌಂಡರಿ ನೆರವಿನಿಂದ 27 ರನ್ ಕಲೆ ಹಾಕಿದರು. ಮುಂಬೈ ಇಂಡಿಯನ್ಸ್ ಪರ ಅಮೆಲಿಯಾ ಕೆರ್ 5 ವಿಕೆಟ್, ಹೇಲಿ ಮ್ಯಾಥ್ಯೂಸ್ 2 ವಿಕೆಟ್ , ನ್ಯಾಟ್ ಸಿವರ್ ಬ್ರಂಟ್ 1 ವಿಕೆಟ್, ಪರುಣಿಕಾ ಸಿಸೋಡಿಯಾ 1 ವಿಕೆಟ್ ಕಬಳಿಸಿದರು.