ಬೆಂಗಳೂರು:ಮಾರ್ಚ್ 1 ರಿಂದ 8 ರವರೆಗೆ ನಡೆಯುತ್ತಿರುವ 16ನೇ ಬೆಂಗಳೂರು ಅಂತರ ರಾಷ್ಟ್ರೀಯ ಚಲನ ಚಿತ್ರೋತ್ಸವದಲ್ಲಿ (BIFF) ರಾಜಾಜಿನಗರದ ಓರಿಯನ್ ಮಾಲ್ನಲ್ಲಿರುವ,ಆರ್,ಸಿನಿಮಾಸ್ನ 11 ಪರದೆಗಳಲ್ಲಿ, 60 ದೇಶಗಳ 200 ಕ್ಕೂ ಹೆಚ್ಚು ಚಲನಚಿತ್ರಗಳು ಪ್ರದರ್ಶನಗೊಳ್ಳಲಿವೆ.

ಕಳೆದ ವರ್ಷದ ಅತ್ಯಂತ ಯಶಸ್ವೀ ಚಿತ್ರ ಎಂದು ಪರಿಗಣಿಸಲಾದ ತಮಿಳು ಭಾಷೆಯ ʼಅಮರನ್ʼ ಚಿತ್ರವು ಅತ್ಯುತ್ತಮ ಹಿನ್ನಲೆ ಸಂಗೀತ , ಅತ್ಯುತ್ತಮ ನಿರ್ದೇಶನ, ಅತ್ಯುತ್ತಮ ನಟ, ಅತ್ಯುತ್ತಮ ನಟಿ ಮತ್ತು ಅತ್ಯುತ್ತಮ ಚಿತ್ರಕಥೆ, ಪ್ರಶಸ್ತಿಯನ್ನು ಪಡೆದುಕೊಂಡಿತ್ತು. ಬೆಂಗಳೂರು ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವದಲ್ಲಿ
ಪ್ರಪಂಚದಾದ್ಯಂತದ ಸಾಕ್ಷ್ಯ ಚಿತ್ರಗಳು ಸೇರಿದಂತೆ ಎಲ್ಲಾ ಪ್ರಕಾರಗಳ ಚಲನ ಚಿತ್ರಗಳನ್ನು ಪೂರ್ವ ವೀಕ್ಷಣೆ ಮಾಡಲಾಗುತ್ತದೆ.
ಅಮರನ್ ಚಿತ್ರವು ಕಾಶ್ಮೀರದಲ್ಲಿ ಭಯೋದ್ಪಾದಕರೊಂದಿಗೆ ಹೋರಾಡಿ ಹುತಾತ್ಮರಾದ ಮೇಜರ್ ಮುಕುಂದ್ ವರದರಾಜನ್ ಅವರ ಜೀವನದ ಕಥೆಯನ್ನು ಒಳಗೊಂಡಿದೆ. ಕರ್ನಾಟಕ ಚಲನ ಚಿತ್ರ ಅಕಾಡೆಮಿ ಅಧ್ಯಕ್ಷರಾದ ಡಾ. ಸಾದು ಕೋಕಿಲಾ ಅವರು ಅಮರನ್ ಚಿತ್ರ ತಂಡವನ್ನು ಅಭಿನಂದಿಸಿದರು.