
ಇತ್ತೀಚೆಗೆ ಚಂದನವನದಲ್ಲಿ ಮದುವೆ ಸದ್ದು ಜೋರಾಗಿದೆ. ಸ್ಯಾಂಡಲ್ವುಡ್ ತಾರೆಯರು ಒಬ್ಬರಾದ ಮೇಲೆ ಒಬ್ಬರು ಹಸೆಮಣೆ ಏರಲು ಸಜ್ಜಾಗಿದ್ದಾರೆ.

ಇದೀಗ ಫೈಟರ್, ಅಬ್ಬರ ಮುಂತಾದ ಸಿನಿಮಾಗಳಲ್ಲಿ ನಟಿಸಿರುವ ಕನ್ನಡದ ನಟಿ ಲೇಖಾ ಚಂದ್ರ ಅವರು ಎಂಗೇಜ್ ಆಗಿದ್ದಾರೆ. ಸಕಲೇಶಪುರದ ರೆಸಾರ್ಟ್ವೊಂದರಲ್ಲಿ ಲೇಖಾ ಚಂದ್ರ ಹಾಗೂ ಶ್ರೇಯಸ್ ದರ್ಶನ್ ಅವರ ಎಂಗೇಜ್ಮೆಂಟ್ ನಡೆದಿದೆ. ಉಂಗುರು ಬದಲಾಯಿಸಿಕೊಂಡಿರುವ ಫೋಟೋಗಳು ಇಲ್ಲಿವೆ ನೋಡಿ.

j3tvkannada.in
ಕನ್ನಡದ ನಟಿ ಲೇಖಾ ಚಂದ್ರ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಹ್ಯಾಟ್ರಿಕ್ ಹೀರೋ ನಟ ಶಿವರಾಜ್ಕುಮಾರ್ ನಟನೆಯ ವಜ್ರಕಾಯ, ಕೃಷ್ಣ ರುಕ್ಕು, ನಮೋ ಭೂತಾತ್ಮ 2 , ಫೈಟರ್, ಅಬ್ಬರ ಸೇರಿದಂತೆ ಹಲವು ಸಿನಿಮಾಗಳಲ್ಲಿ ಲೇಖಾ ಚಂದ್ರ ಅವರು ನಟಿಸಿದ್ದಾರೆ. ಸದ್ಯ ಪ್ರೀತಿಸಿದ ಹುಡುಗನ ಜೊತೆ ನಟಿ ಲೇಖಾ ಚಂದ್ರ ನಿಶ್ಚಿತಾರ್ಥ ಮಾಡಿಕೊಂಡು ಗುಡ್ ನ್ಯೂಸ್ ಕೊಟ್ಟಿದ್ದಾರೆ.

ನಟಿ ಲೇಖಾ ಚಂದ್ರ ನಿರ್ಮಾಪಕ ಶ್ರೇಯಸ್ ದರ್ಶನ್ ಜೊತೆ ಎಂಗೇಜ್ ಆಗಿದ್ದಾರೆ. ಶ್ರೇಯಸ್ ದರ್ಶನ್ ಅವರು ಬಲರಾಮನ ದಿನಗಳು ಎಂಬ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಈ ಜೋಡಿ ಪ್ರೀತಿಸಿ ಇದೀಗ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.