
ಮೈಸೂರು: ಗರ್ಭಿಣಿಯರಿಗೆ ಮೊಬೈಲ್ ಫೋನ್ ಕರೆಯ ಮೂಲಕ ಆರೋಗ್ಯ ಸೇವೆ ಒದಗಿಸುವ ಯೋಜನೆಯನ್ನು ಆರೋಗ್ಯ ಇಲಾಖೆ ಆರಂಭಿಸಿದೆ.

j3tvkannada
ತಾಯಿ-ಮಗುವಿನ ಮರಣ ಪ್ರಮಾಣ ತಗ್ಗಿಸುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಸಹಯೋಗದಲ್ಲಿ ಸೇವೆಯನ್ನು ಆರಂಭಿಸಲಾಗಿದೆ.
ನಾಲ್ಕು ತಿಂಗಳು ಮೇಲ್ಪಟ್ಟ ಗರ್ಭಿಣಿ ಹಾಗೂ ಒಂದು ವರ್ಷದೊಳಗಿನ ಶಿಶುಗಳ ಆರೈಕೆಯಲ್ಲಿ ಕುಟುಂಬದವರು ವಹಿಸಬೇಕಾದ ಕಾಳಜಿ, ಲಸಿಕೆ ಕೊಡಿಸುವುದು ಹಾಗೂ ಇತರ ತಪಾಸಣೆ ಕುರಿತು ಕನ್ನಡ ಸೇರಿದಂತೆ ವಿವಿಧ ಭಾಷೆಗಳಲ್ಲಿ ಮುದ್ರಿತ ಅಡಿಯೊಗಳ ಮಾಹಿತಿ ಒದಗಿಸಲಾಗುವುದು.
ಹೆಚ್ಚುವರಿ ಅಥವಾ ನಿರ್ದಿಷ್ಟ ಮಾಹಿತಿಯ ಅಗತ್ಯವಿದ್ದಲ್ಲಿ ಸಂದೇಶ ಕಳುಹಿಸಿ ಪಡೆದುಕೊಳ್ಳಬಹುದಾಗಿದೆ. ತಾಯಿ ಕಾರ್ಡ್ ಪಡೆದಿರುವ ಎಲ್ಲರಿಗೂ, ಅವರು ಒದಗಿಸಿದ ಮೊಬೈಲ್ ಫೋನ್ ಸಂಖ್ಯೆಗೆ ಇಲಾಖೆಯಿಂದ ಕರೆ ಬರುತ್ತದೆ. ಒಮ್ಮೆ ಸ್ವೀಕರಿಸಿದರೆ ನಿಯಮಿತವಾಗಿ ಸಲಹಾ ಕರೆಗಳು ಬರುತ್ತಿರುತ್ತವೆ.
ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆ ಯಾರಿಗೂ ಇಂತಹ ಕರೆ ಬರುತ್ತವೆ. ಅವರು ಸ್ವೀಕರಿಸಿ ಕೇಳಿಸಿಕೊಂಡರೆ ಅದು ರೆಕಾರ್ಡ್ ಆಗುತ್ತದೆ. ಅದನ್ನು ಗರ್ಭಿಣಿಯರ ಸಂಖ್ಯೆಗೆ ಕಳುಹಿಸುವ ವ್ಯವಸ್ಥೆ ಇದಾಗಿದೆ ಎಂದು ಡಿ.ಎಚ್.ಒ ಡಾ.ಪಿ.ಸಿ. ಕುಮಾರಸ್ವಾಮಿ ಅವರು ತಿಳಿಸಿದ್ದಾರೆ.
ಜಾಗೃತಿ: ತಾಯಿ, ಮಕ್ಕಳ ಅಪೌಷ್ಟಿಕತೆ ನಿವಾರಣೆಗೆ, ಮಕ್ಕಳ ಲಸಿಕಾ ಪ್ರಮಾಣದ ಶೇ 100ರಷ್ಟು ಗುರಿ ಸಾಧಿಸಲು ಯೋಜನೆ ಸಹಕಾರಿಯಾಗಲಿದೆ. ಈ ನಿಟ್ಟಿನಲ್ಲಿ ಆರೋಗ್ಯ ಸಿಬ್ಬಂದಿ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ ಎನ್ನುತ್ತಾರೆ ಅವರು.