
ಕೊಡಗು: ಪ್ರಜ್ವಲ್ ಪೂವಣ್ಣ ಅವರ ಹ್ಯಾಟ್ರಿಕ್ ಗೋಲುಗಳ ನೆರವಿನಿಂದ ಪರದಂಡ ತಂಡವು ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನ ಮೈದಾನದಲ್ಲಿ ನಡೆಯುತ್ತಿರುವ ಮುದ್ದಂಡ ಕಪ್ ಕೊಡವ ಕೌಟುಂಬಿಕ ಹಾಕಿ ಟೂರ್ನಿಯಲ್ಲಿ ಶನಿವಾರ 3-0 ಅಂತರದಿಂದ ಐನಂಡ ವಿರುದ್ಧ ಜಯ ಸಾಧಿಸಿತು.

j3tvkannada
ದಿನದ ಉಳಿದ ಪಂದ್ಯಗಳಲ್ಲಿ ಚೆಪ್ಪುಡಿರ 4-0ಯಿಂದ ಕರ್ತಮಾಡ ವಿರುದ್ಧ, ಮೇಚಿಯಂಡ 2-1ರಿಂದ ಮಾದಂಡ ವಿರುದ್ಧ, ಬೊಟ್ಟೋಳಂಡ 2-1ರಿಂದ ಬೊಳ್ಳಂಡ ವಿರುದ್ಧ, ನಾಳಿಯಂಡ 2-0ರಿಂದ ಐಚೆಟ್ಟರ ವಿರುದ್ಧ, ನೆಲ್ಲಮಕ್ಕಡ 4-1ರಿಂದ ನಾಪಂಡ ವಿರುದ್ಧ, ಕೋಳೇರ 3-0ಯಿಂದ ಚೆಕ್ಕೇರ ವಿರುದ್ಧ, ಕರವಂಡ 2-1ರಿಂದ ಬಯವಂಡ ವಿರುದ್ಧ, ಇಟೀರ 1-0ಯಿಂದ ಕೋನೇರಿರ ವಿರುದ್ಧ, ಕುಪ್ಪಂಡ (ಕೈಕೇರಿ) 1-0ಯಿಂದ ಮತ್ರಂಡ ವಿರುದ್ಧ ಜಯ ಸಾಧಿಸಿದವು. ಟೈ ಬ್ರೇಕರ್ನಲ್ಲಿ ಕೊಂಗೇಟಿರ 5-3ರಿಂದ ಚೇನಂಡ ವಿರುದ್ಧ, ಕಂಬೀರಂಡ 5-3ರಿಂದ ಕಳ್ಳಿಚಂಡ ವಿರುದ್ಧ, ಕಾಂಡಂಡ 4-3ರಿಂದ ಕುಲ್ಲೇಟಿರ ವಿರುದ್ಧ ಜಯ ಗಳಿಸಿದವು.

j3tvkannada