
ಹುಬ್ಬಳ್ಳಿ: ಪಿಯುಸಿ ಬಳಿಕ ಮುಂದಿನ ಕೋರ್ಸ್ಗಳ ಆಯ್ಕೆ ಜೊತೆಗೆ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಿದ್ಧತೆ ನಡೆಸಿದ್ದರೆ, ಇಲ್ಲಿದೆ ಉತ್ತಮ ಅವಕಾಶ. ಯಾವ ಕೋರ್ಸ್ ಓದಿದರೆ ಸೂಕ್ತ, ಯಾವ ಕ್ಷೇತ್ರದಲ್ಲಿ ಹೆಚ್ಚು ಉದ್ಯೋಗಾವಕಾಶವಿದೆ ಎಂಬುದನ್ನು ತಿಳಿಯಬಹುದು. ಅಗತ್ಯ ಮಾರ್ಗದರ್ಶನವೂ ಉಚಿತವಾಗಿ ಸಿಗುತ್ತದೆ. ನೀವು ಮಾಡಬೇಕಾದದ್ದು ಇಷ್ಟೇ. ಏಪ್ರಿಲ್ 19 ಮತ್ತು 20ರಂದು ಹುಬ್ಬಳ್ಳಿಯ ನೆಹರೂ ಕ್ರೀಡಾಂಗಣದಲ್ಲಿ ಆಯೋಜಿಸಿರುವ ‘ಎಡ್ಯುವರ್ಸ್’ ಶೈಕ್ಷಣಿಕ ಮೇಳಕ್ಕೆ ಭೇಟಿ ನೀಡಿದರೆ ಸಾಕು.

j3tvkannada
ವೈದ್ಯಕೀಯ, ಎಂಜಿನಿಯರಿಂಗ್, ಎಐ ತಂತ್ರಜ್ಞಾನ, ವಾಸ್ತುಶಿಲ್ಪ, ನರ್ಸಿಂಗ್, ಡಿಪ್ಲೊಮಾ, ಬ್ಯುಸಿನೆಸ್ ಮ್ಯಾನೇಜ್ಮೆಂಟ್, ಡಿಜಿಟಲ್ ಮಾರ್ಕೆಟಿಂಗ್ ಎಂ.ಬಿ.ಎ, ಬಿ.ಟೆಕ್, ಎಂ.ಟೆಕ್, ರೋಬೋಟಿಕ್ಸ್, ಪ್ರವಾಸೋದ್ಯಮ, ಎಂ.ಸಿ.ಎ, ಫ್ಯಾಷನ್ ಡಿಸೈನ್ ಹೀಗೆ ವಿವಿಧ ಕೋರ್ಸ್ಗಳ ಬಗ್ಗೆ ವಿವಿಧ ಸಂಸ್ಥೆಗಳು ಮಾಹಿತಿ ಒದಗಿಸಲಿವೆ. ವಿವಿಧ ವೃತ್ತಿಪರ ಕೋರ್ಸ್ಗಳ ಬಗ್ಗೆ ನಿಖರ ಮಾಹಿತಿ, ಮಾರ್ಗದರ್ಶನವನ್ನು ಈ ಮೇಳದಲ್ಲಿ ಪಡೆಯಬಹುದು. ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳು ಭಾಗವಹಿಸಲಿವೆ. ಶಿಕ್ಷಣ ತಜ್ಞರು, ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರ ಜೊತೆ ಚರ್ಚಿಸಬಹುದು. ಶೈಕ್ಷಣಿಕ ಕ್ಷೇತ್ರ ಕುರಿತು ಸಮಗ್ರ ಮಾಹಿತಿ ಪಡೆಯಬಹುದು.
ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳ ಮಳಿಗೆಗಳಿಗೆ ಭೇಟಿ ನೀಡಿದರೆ, ಮುಖ್ಯಸ್ಥರು ಮತ್ತು ಪ್ರತಿನಿಧಿಗಳು ತಮ್ಮ ಸಂಸ್ಥೆಗಳಲ್ಲಿ ಲಭ್ಯವಿರುವ ಕೋರ್ಸ್ ಮತ್ತು ಅವಕಾಶಗಳ ಬಗ್ಗೆ ವಿವರಿಸುವರು. ಅಗತ್ಯ ಮಾಹಿತಿ ಪತ್ರ, ಕರಪತ್ರಗಳನ್ನು ನೀಡುವರು. ವೆಬ್ಸೈಟ್ ವಿಳಾಸ ಅಲ್ಲದೇ ದೂರವಾಣಿ ಸಂಖ್ಯೆಗಳನ್ನು ಒದಗಿಸುವರು. ಕೋರ್ಸ್ಗಳ ಆಯ್ಕೆಗೆ ಸಂಬಂಧಿಸಿದಂತೆ ಯಾವುದೇ ರೀತಿಯ ಗೊಂದಲ, ಸಮಸ್ಯೆಗಳಿದ್ದರೆ ಪರಿಹರಿಸಿಕೊಳ್ಳಿ. ಎಲ್ಲಾ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರನ್ನು ಮತ್ತು ಪ್ರತಿನಿಧಿಗಳನ್ನು ಒಂದೇ ಸೂರಿನಡಿ ಭೇಟಿಯಾಗುವ ಮತ್ತು ಸಂವಾದ ನಡೆಸುವ ಅವಕಾಶ ತಪ್ಪಿಸಿಕೊಳ್ಳಬೇಡಿ.