
ಬೆಳಗಾವಿ : ಜಿಂದಾಲ್ ಫ್ಯಾಕ್ಟರಿಯ ಕಬ್ಬಿಣದ ಅದಿರನ್ನು ತುಂಬಿಕೊಂಡು ಹೋಗುತ್ತಿದ್ದ ವೇಳೆ ಬೆಳಗಾವಿ ವಿಮಾನ ನಿಲ್ದಾಣದ ಬಳಿ ರೈಲು ಹಳಿ ತಪ್ಪಿದೆ. ಮೀರಜ್ ಕಡೆಗೆ ಹೊರಟಿದ್ದ ಗೂಡ್ಸ್ ರೈಲಿನ ಎರಡು ಬೋಗಿಗಳು ಬೆಳಗಾವಿ ಬಳಿ ಹಳಿ ತಪ್ಪಿದ್ದು ಬೇರೆ ರೈಲುಗಳ ಓಡಾಟಕ್ಕೆ ಅಡಚಣೆಯಾಗಿದೆ. ಸುಮಾರು 4 ಗಂಟೆಗಳ ಕಾಲ ದುರಸ್ತಿ ಕಾರ್ಯಗಳು ನಡೆಯಲಿವೆ ಎಂದು ರೈಲ್ವೇ ಅಧಿಕಾರಿಗಳು ತಿಳಿಸಿದ್ದಾರೆ.

j3tvkannada
ಬೆಳಗಾವಿ ಮೀರಜ್ ಮಾರ್ಗದ ಎಲ್ಲಾ ರೈಲುಗಳ ಸಂಚಾರ ಸ್ಥಗಿತವಾಗಿವೆ. ದುರಸ್ತಿ ಕಾರ್ಯ ಮುಗಿದ ಮೇಲೆ ಆರಂಭ ಆಗಲಿದೆ. ಮೀರಜ್ನಿಂದ ಹೊರಟಿದ್ದ ಚಾಲುಕ್ಯ ಶರಾವತಿ ಎಕ್ಸ್ಪ್ರೆಸ್, ಎಲ್.ಟಿ.ಟಿ ದಾದರ್, ಅಜ್ಮೇರ್ ಎಕ್ಸ್ಪ್ರೆಸ್ ಮಾರ್ಗ ಮಧ್ಯೆಯೇ ನಿಂತಿದೆ. ಇನ್ನು ಬೆಳಗಾವಿಯಿಂದ ಹೊರಟಿದ್ದ ಬೆಂಗಳೂರು ಜೋದ್ಪುರ್ ಎಕ್ಸ್ಪ್ರೆಸ್, ಬೆಂಗಳೂರಿಂದ ಹೊರಟ ಭಗತ್ ಕೋಟಿ, ಹಾಗೆಯೇ ಕ್ಯಾಸಲ್ ರಾಕ್-ಮೀರಜ್ ಪ್ಯಾಸೆಂಜರ್, ಹರಿಪ್ರಿಯಾ ರೈಲುಗಳ ಸಂಚಾರ ವ್ಯತ್ಯಯವಾಗಿದೆ ಎಂದು ತಿಳಿದು ಬಂದಿದೆ.