
ಧಾರವಾಡ : ವಿದ್ಯಾರ್ಥಿಗಳಲ್ಲಿನ ಸೃಜನಶೀಲತೆ, ಕಲಾತ್ಮಕ ನೋಟ, ಸೂಕ್ಷ್ಮ ವಿವರಗಳಿಗೆ ಹೊಳಪು ನೀಡುವ ಪೇಂಟಿಂಗ್ಸ್ , ಶಿಲ್ಪಕಲೆ , ದೃಶ್ಯಕಲೆ , ಅನ್ವಯಿಕ ಕಲೆ ಮತ್ತು ಕಲಾ ಇತಿಹಾಸದ ಅಧ್ಯಯನವನ್ನು ಒಳಗೊಂಡಿರುವ ‘ಲಲಿತ ಕಲೆ’ ವಿಸ್ತಾರವಾದ ಕೋರ್ಸ್. ವಾಸ್ತುಶಿಲ್ಪ, ಸಂಗೀತ, ಕಾವ್ಯದೊಂದಿಗೆ ಪ್ರದರ್ಶನ ಕಲೆಗಳಾದ ರಂಗಭೂಮಿ ಮತ್ತು ನೃತ್ಯವೂ ಸಹ ಲಲಿತಕಲೆಯ ವ್ಯಾಪ್ತಿಗೇ ಸೇರಿವೆ.

j3tvkannada
ಚಿತ್ರಕಲಾ ಕೋರ್ಸ್ಗೆ ಸೇರಲು ಅರ್ಹತೆಗಳು ಆಯ್ದುಕೊಳ್ಳುವ ಕೋರ್ಸ್ ಮತ್ತು ಕಾಲೇಜಿನ ಮೇಲೆ ಅವಲಂಬಿತ. ಆದಾಗ್ಯೂ, ಪದವಿ(ಬ್ಯಾಚುಲರ್ ಆಫ್ ಫೈನ್ ಆರ್ಟ್ಸ್)ಗೆ ಸೇರಲು ಸಾಮಾನ್ಯ ಅರ್ಹತೆ ಪಿಯುಸಿ ಉತ್ತೀರ್ಣರಾಗಿರಬೇಕು.ಕಲಾ ಪದವಿ ವಿಷಯಗಳು. ನಾಲ್ಕು ವರ್ಷದ ಬ್ಯಾಚುಲರ್ ಆಫ್ ಫೈನ್ ಆರ್ಟ್ಸ್ (BFA) ಪದವಿಯಲ್ಲಿ ವಿದ್ಯಾರ್ಥಿಗಳು ಸಾಮಾನ್ಯವಾಗಿ ಡ್ರಾಯಿಂಗ್, ಪೇಂಟಿಂಗ್, ಶಿಲ್ಪಕಲೆ, ಮುದ್ರಣ ತಯಾರಿಕೆ, ಕಲಾ ಇತಿಹಾಸ, ಬಣ್ಣ ಸಿದ್ಧಾಂತ, ದೃಶ್ಯ ಸಂವಹನ, ಅನಿಮೇಷನ್, ಡಿಜಿಟಲ್ ಆರ್ಟ್, ಫಿಗರ್ ಡ್ರಾಯಿಂಗ್, ಛಾಯಾಗ್ರಹಣ, ಗ್ರಾಫಿಕ್ ವಿನ್ಯಾಸ, ಸೆರಾಮಿಕ್ಸ್, ಜವಳಿ ವಿನ್ಯಾಸದಂತಹ ಕಲಾ ಪ್ರಕಾರಗಳನ್ನು ಅಧ್ಯಯನ ಮಾಡುತ್ತಾರೆ. ಆಯಾ ಕೋರ್ಸ್ ಗಳಿಗೆ ಪ್ರವೇಶ ಪ್ರಕ್ರಿಯೆ ಕಾಲೇಜಿನಿಂದ ಕಾಲೇಜಿಗೆ ಬದಲಾಗಬಹುದು.
ಉದ್ಯೋಗಾವಕಾಶ:
ಚಿತ್ರಕಲಾ ಪದವಿ ಪೂರ್ಣಗೊಳಿಸಿದವರು ಸರ್ಕಾರಿ ಪ್ರಾಥಮಿಕ/ಹೈಸ್ಕೂಲ್ ನಲ್ಲಿ ಕಲಾಶಿಕ್ಷಕರಾಗಬಹುದು. ಇಲ್ಲವೇ ವಿವಿಧ ಕಂಪನಿಗಳು, ಜಾಹೀರಾತು ಸಂಸ್ಥೆಗಳು, ಪ್ರಕಾಶನ ಸಂಸ್ಥೆಗಳು, ವೆಬ್ ಡಿಸೈನ್ ಕಂಪನಿಗಳು, ಅನಿಮೇಷನ್ ಸ್ಟುಡಿಯೋಗಳು, ಚಲನಚಿತ್ರ ಮತ್ತು ಟಿವಿ ಉದ್ಯಮ, ಸ್ವತಂತ್ರ ಕಲಾವಿದ/ಡಿಸೈನರ್ ಆಗಿಯೂ ಕೆಲಸ ಮಾಡಬಹುದು.