
ಉಡುಪಿ: ಪಡುಬಿದ್ರಿ ಪಲಿಮಾರು ಮೂಲಮಠದಲ್ಲಿ ರಾಮ ನವಮಿಯ ಪರ್ವಕಾಲದಲ್ಲಿ ಶನಿವಾರ ಪುನರ್ವಸು ನಕ್ಷತ್ರ ದಿನ ಪ್ರತಿ ತಿಂಗಳಿನಂತೆ ಸಪ್ತತಿ ಸಂಭ್ರಮದ ಧರ್ಮ ಕರ್ಮಾಚರಣೆಗಳು ಸಂಹಿತಾ ಸಹಿತ ಸರ್ವಮೂಲ ಪಾರಾಯಣ ಜಪಾದಿಗಳು ಸಂಪನ್ನಗೊಂಡವು.

j3tvkannada
ತ್ರಿಕಾಲ ರಾಮಭದ್ರ ಕಮಂಡಲ ಪೂಜೆ, ರಾಮತಾರಕ ಮಂತ್ರ ಹೋಮ, ಧನ್ವಂತರಿ ತ್ರಿವಿಕ್ರಮ ಗಾಯತ್ರಿ ಹೋಮ, ಗುರು ಶಾಂತಿ ವಿಧ್ಯುಕ್ತವಾಗಿ ನಡೆದವು. ಭಾನುವಾರ ರಾಮನವಮಿ ದಿನ ಪಟ್ಟದದೇವರಾದ ಶ್ರೀರಾಮನಿಗೆ ಪಂಚಾಮೃತ ಅಭಿಷೇಕ ಸಹಿತ ಡೋಲೋತ್ಸವ, ಅಷ್ಟಾವಧಾನ ಸೇವೆ ನಡೆದವು.
ವಿದ್ಯಾಧೀಶತೀರ್ಥ ಶ್ರೀಪಾದ ಸ್ವಾಮೀಜಿ, ಭಗವಂತನಿಗೆ ಕೊಟ್ಟ ಎಲ್ಲವನ್ನೂ ಆತ ಭಕ್ತರಿಗೆ ಅನುಗ್ರಹಿಸುವನು.