
ಬೆಂಗಳೂರು ಗ್ರಾಮಾಂತರ: ಪ್ರಾಚೀನ ವಸ್ತುಗಳೆಂದು ನಂಬಿಸಿ ಜನರಿಗೆ ಮಾರಾಟ ಮಾಡುತ್ತಿದ್ದ ಜಾಲವನ್ನು ನಗರ ಠಾಣೆ ಪೊಲೀಸರು ಪತ್ತೆ ಹಚ್ಚಿ ವ್ಯಕ್ತಿಯೊಬ್ಬರನ್ನು ಬಂಧಿಸಿದ್ದಾರೆ.

ಪ್ರಾಚೀನ ವಸ್ತುಗಳ ಬಗ್ಗೆ ಆಸಕ್ತಿ ಇರುವ ಗ್ರಾಹಕರನ್ನು ಹುಡುಕಿ ಹೆಚ್ಚಿನ ಮೊತ್ತಕ್ಕೆ ಮಾರಾಟ ಮಾಡುತ್ತಿದ್ದ ಜಾಲವನ್ನು ಬೇಧಿಸಿರುವ ಪೊಲೀಸರು, ಆರೋಪಿಗಳಿಂದ ನಕಲಿ ರೈಸ್ ಪುಲ್ಲಿಂಗ್ ಹಾಗೂ ಡಬ್ಲಿಂಗ್ ವಸ್ತುಗಳನ್ನು ವಶಪಡಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಪ್ರಾಚೀನ ವಸ್ತುಗಳನ್ನು ಖರೀದಿಸಿ ಮನೆಯಲ್ಲಿ ಇಟ್ಟುಕೊಂಡರೆ ಅದೃಷ್ಟ ಬರುತ್ತದೆ ಎಂದು ಯಾಮಾರಿಸಿ ಹಣ ಮಾಡುವ ದಂಧೆಯನ್ನು ಮಾಡುತ್ತಿದ್ದರು. ಪ್ರಕರಣದ ಪ್ರಮುಖ ಆರೋಪಿ ವಲೇರಿಯನ್ ಗೊನ್ಸಾಲ್ವಿಸ್ ವೆಲ್ಲಿಸ್ನನ್ನು ಬಂಧಿಸಿದ್ದು ಉಳಿದ ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.