
ಬೆಂಗಳೂರು: ವಸತಿಯೇತರ ಕಟ್ಟಡಗಳಿಗೆ 2 ಸಾವಿರದಿಂದ 35 ಲಕ್ಷದವರೆಗೆ ಪ್ರತಿ ತಿಂಗಳು ಶುಲ್ಕವನ್ನು ವಿಧಿಸಲಾಗುತ್ತದೆ ಎಂದು ಏಪ್ರಿಲ್ 5ರ ಆದೇಶದಲ್ಲಿ ತಿಳಿಸಲಾಗಿತ್ತು. ಅದನ್ನು ಪರಿಷ್ಕರಿಸಿ ವಾರ್ಷಿಕವಾಗಿ ವಿಧಿಸುವ ಶುಲ್ಕ ಎಂದು ಪ್ರಕಟಿಸಲಾಗಿದೆ.

j3tvkannada
2024ರಲ್ಲಿ ಬಿಬಿಎಂಪಿ ಘನತ್ಯಾಜ್ಯ ನಿರ್ವಹಣೆ ಉಪ ನಿಮಯಗಳನ್ನು (ಬೈ-ಲಾ) ಅಧಿಸೂಚಿಸಲಾಗಿದ್ದು, ಅದರಲ್ಲಿ ಯಾರಿಗೆ ಎಷ್ಟು ಸೆಸ್ ಹಾಗೂ ಬಳಕೆದಾರರ ಶುಲ್ಕವನ್ನು ವಿಧಿಸಬೇಕು ಎಂಬುದನ್ನು ಪ್ರಕಟಿಸಲಾಗಿದೆ. ಅದಕ್ಕಿಂತ ಕಡಿಮೆ ಶುಲ್ಕವನ್ನು ಬಿಬಿಎಂಪಿ ಐದು ವರ್ಷದ ನಂತರ ಜಾರಿ ಮಾಡಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಸೇರಿದಂತೆ ಹಿರಿಯ ಅಧಿಕಾರಿಗಳು ಪ್ರತಿಪಾದಿಸಿದ್ದಾರೆ.
ಬೈ-ಲಾದಂತೆ, ಎಲ್ಲ ವಸತಿ ಕಟ್ಟಡಗಳಿಗೆ ಪ್ರತಿ ತಿಂಗಳಿಗೆ ₹200 ಬಳಕೆದಾರರ ಶುಲ್ಕವಿದೆ. ಬಿಬಿಎಂಪಿ ಜಾರಿ ಮಾಡಿರುವ ಬಳಕೆದಾರರ ಶುಲ್ಕದಂತೆ 600 ಚದರಡಿಯಷ್ಟು ಕಟ್ಟಡ ಹೊಂದಿರುವವರಿಗೆ ತಿಂಗಳಿಗೆ ₹10, 601 ಚದರಡಿಯಿಂದ 1000 ಚದರಡಿವರೆಗಿನ ಕಟ್ಟಡಕ್ಕೆ ತಿಂಗಳಿಗೆ ₹50 ವಿಧಿಸಲಾಗಿದೆ. ಬಡವರ್ಗದ ಜನರಿಗೆ ಇದು ಹೆಚ್ಚಿನ ಹೊರೆಯಾಗುವುದಿಲ್ಲ ಎಂಬುದು ಅಧಿಕಾರಿಗಳ ಮಾತು.