
ಹಾಸನ: ಗೊರೂರು ರಸ್ತೆಯ ಸಂತೆ ಮೈದಾನದ ಬಳಿ ಐದು ಜನರನ್ನು ಬಂಧಿಸಿರುವ ನಗರ ಠಾಣೆಯ ಪೊಲೀಸರು, 3,68,920 ಮೌಲ್ಯದ ಎಂಡಿಎಂ ಮಾದಕವಸ್ತು, 4,900 ನಗದು, ಬೈಕ್, ಹಾಗೂ ಕಾರನ್ನು ವಶಕ್ಕೆ ಪಡೆದಿದ್ದಾರೆ.

ಖಚಿತ ಮಾಹಿತಿ ಮೇಲೆ ದಾಳಿ ನಡೆಸಿದ ನಗರ ಠಾಣೆಯ ಇನ್ಸ್ಪೆಕ್ಟರ್ ಮೋಹನ್ಕೃಷ್ಣ ಹಾಗೂ ಸಿಬ್ಬಂದಿ, ಮಹಬೂಬ್ನಗರದ ಫಜ್ಜು ಅಹಮದ್, ಟಿಪ್ಪುನಗರದ ಮೊಹಮದ್ ಮಾಜ್, ಪೆನ್ನನ್ ಮೊಹಲ್ಲಾದ ಜಾವಿದ್ ಪಾಷಾ, ಆದರ್ಶನಗರದ ಸದ್ದಾಂ ಹಾಗೂ ಬೆಂಗಳೂರಿನ ಮೊಹಮ್ಮದ್ ಫಹೀಂ ಅನ್ಸಾರ್ ಎಂಬುವವರನ್ನು ವಶಕ್ಕೆ ಪಡೆದಿದ್ದಾರೆ.
ಆರೋಪಿಗಳು ಬೆಂಗಳೂರಿನಿಂದ ಎಂಡಿಎಂಎ ಮಾದಕ ವಸ್ತು ತಂದು, ಮಾರಾಟ ಮಾಡಲು ಹಂಚಿಕೊಳ್ಳುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಹಾಸನ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.