

ಮೈಸೂರು: ಸಾಂಸ್ಕೃತಿಕ ನಗರ ಮೈಸೂರಿನಲ್ಲಿ ಪ್ರವಾಸಿ ತಾಣಗಳಲ್ಲಿ ಹಾಗೂ ಜನರನ್ನು ಆಕರ್ಷಣೆ ಮಾಡುವ ಪ್ರೇಕ್ಷಣಿಯ ಸ್ಥಳ ಯಾವುದೆಂದರೆ ಅಂಬಾವಿಲಾಸ ಅರಮನೆ ಎಂದು ಹೇಳಬಹುದು. ಬೇಸಿಗೆ ಸಮಯದಲ್ಲಿ ಪ್ರವಾಸಿ ತಾಣಗಳಿಗೆ ಜನರು ಹೋಗುವುದು ಬಹಳ ಕಡಿಮೆ. ಆದರೆ ಅಂಬಾವಿಲಾಸ ಅರಮನೆ ಬೇಸಿಗೆ ಸಮಯದಲ್ಲಿಯೂ ಸಹ ಬೇರೆ ಜಿಲ್ಲೆ ಹಾಗೂ ರಾಜ್ಯಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿಯನ್ನು ನೀಡುತ್ತಿದ್ದಾರೆ. ಅಂಬಾವಿಲಾಸ ಅರಮನೆ ಹೆಚ್ಚು ಆಕರ್ಷಣೆ ಆಗಿದೆ. ಏಕೆಂದರೆ ಬೇಸಿಗೆಯಲ್ಲಿಯೂ ಸಹ ಅರಮನೆ ಮುಂಭಾಗ ಹಚ್ಚ ಹಸಿರಿನಿಂದ ಕೂಡಿದ ಗಿಡಗಳು ಎಂದು ಹೇಳಬಹುದು. ಹೂವಿನ ಗಿಡಗಳನ್ನು ಅರಮನೆ ತೋಟಗಾರಿಕೆ ಇಲಾಖೆಯು ಮಳೆಗಾಲವಾಗಲಿ ಇಲ್ಲವಾದರೆ ಬೇಸಿಗೆಗಾಲದಲ್ಲಿಯೂ ಸಹ ಗಿಡಗಳು ಬಾಡದಂತೆ ನೋಡಿಕೊಳ್ಳುತ್ತಿದ್ದಾರೆ. ಪ್ರತಿ ನಿತ್ಯವೂ ಬೆಳ್ಳಿಗೆ, ಸಂಜೆ ಸಮಯದಲ್ಲಿ ಗಿಡಗಳಿಗೆ ನೀರು ಹಾಕಿ ನಿರ್ವಹಣೆ ಮಾಡುತ್ತಿದ್ದಾರೆ. ಪರಿಣಾಮ ಗಿಡಗಳು ಬೇಸಿಗೆ ತಾಪ ಹೆಚ್ಚಾದರೂ ನಳನಳಿಸುತ್ತಿವೆ. ಹಸಿರಿನಿಂದ ಕಂಗೊಳಿಸುವ ವಾತಾವರಣದೊಂದಿಗೆ ಅರಮನೆ ವೀಕ್ಷಣೆಗೆ ಪ್ರವಾಸಿಗರೂ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಕೇರಳ, ತಮಿಳುನಾಡು, ಆಂಧ್ರ ಪ್ರದೇಶ, ಬೆಂಗಳೂರು ಮಾತ್ರವಲ್ಲದೇ ಅಮೆರಿಕ, ಆಸ್ಟ್ರೇಲಿಯದಿಂದಲೂ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದು, ಬೇಸಿಗೆಯಲ್ಲಿಯೂ ಅರಮನೆಯೂ ಜನರನ್ನು ಆಕರ್ಷಣೆ ಮಾಡುತ್ತಿದೆ. ಅರಮನೆ ವೀಕ್ಷಣೆಯ ಬಳಿಕ ಪ್ರವಾಸಿಗರು ಹಚ್ಚ ಹಸಿರುನಿಂದ ಕೂಡಿದ ಗಿಡಗಳ ನಡುವೆ ನಿಂತು ಸೆಲ್ಫಿ ಹಾಗೂ ಫೋಟೋಗಳಿಗೆ ಪೋಸ್ ನೀಡುತ್ತಿದ್ದಾರೆ.