
ಕೊಡಗು: ಕುಶಾಲನಗರ ಸಮೀಪದ ಗುಡ್ಡೆಹೊಸೂರು ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿಯಂತ್ರಣ ತಪ್ಪಿದ, ಕೊಳವೆ ಬಾವಿ ಕೊರೆಯುವ ಲಾರಿ ಸೋಮವಾರ ರಸ್ತೆ ಬದಿಯ ಕಿರು ಸೇತುವೆಗೆ ಡಿಕ್ಕಿ ಹೊಡೆದು ಉರುಳಿ ಬಿದ್ದ ಪರಿಣಾಮ ನಾಲ್ಕು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.

j3tvkannada
ಗಾಯಗೊಂಡ ಪಾದಚಾರಿ ನಂಜುಂಡಸ್ವಾಮಿ, ಲಾರಿಯಲ್ಲಿದ್ದ ಚಾಲಕ ಸೇರಿ ಮೂವರಿಗೆ ಗಂಭೀರ ಗಾಯಗಳಾಗಿವೆ. ಸ್ಥಳಕ್ಕೆ ಕುಶಾಲನಗರ ಪೊಲೀಸರು, ಅಗ್ನಿಶಾಮಕ ಠಾಣೆ ಸಿಬ್ಬಂದಿ ಭೇಟಿ ನೀಡಿ ಬೋರ್ ವೆಲ್ ಲಾರಿಯ ಡೀಸೆಲ್ ಸೋರಿಕೆಯಾಗಿ ಹರಿದ ಪರಿಣಾಮ ಬೆಂಕಿ ಅವಘಡ ತಪ್ಪಿಸಲು ಕ್ರಮಗೊಂಡು ಲಾರಿಯನ್ನು ಮೇಲಕ್ಕೆತ್ತಿದರು. ಈ ಸಂಬಂಧ ಕುಶಾಲನಗರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.