ಚಿಕ್ಕಬಳ್ಳಾಪುರ : ಎಲ್ಲಾ ಕಛೇರಿಗಳಲ್ಲೂ ದಾಖಲೆಗಳು ಬೆರಳ ತುದಿಯಲ್ಲೇ ಸಿಗಲಿವೆ ಎಂದು ಸರ್ಕಾರ ಹೇಳುತ್ತದೆ, ಆದರೆ ಚಿಕ್ಕಬಳ್ಳಾಪುರ ತಾಲೂಕು ಕಛೇರಿಯಲ್ಲಿ ಮಾತ್ರ ದಾಖಲೆಗಳೇ ಸಿಗುತ್ತಿಲ್ಲ. ಒಂದು ದಾಖಲೆಗಾಗಿ ತಿಂಗಳು ಗಟ್ಟಲೇ ಅಲೆದರೂ ದಾಖಲೆಗಳು ಸಿಗದೇ ಪರದಾಟ ಮಾಡಬೇಕಾಗುತ್ತದೆ.

ಪ್ರತಿನಿತ್ಯ ಗೆ ಅಲೆದು ಅಲೆದು ಸುಸ್ತಾಗುತ್ತಿದ್ದಾರೆ ಸಾರ್ವಜನಿಕರು. ಇನ್ನು ಇಲ್ಲಿ ರೆಕಾರ್ಡ್ ಕೊಠಡಿಯಲ್ಲಿ ಇದ್ದ ದಾಖಲೆಗಳೇ ಇಲ್ಲವಂತೆ. ಇದು ಚಿಕ್ಕಬಳ್ಳಾಪುರ ತಾಲೂಕು ಕಛೇರಿಯ ದುರ್ವ್ಯವಸ್ಥೆ ಹಾಗಾದರೆ ಕಛೇರಿಯಲ್ಲಿದ್ದ ದಾಖಲೆಗಳನ್ನು ಕದ್ದೊಯ್ದವರು ಯಾರು…? ದಾಖಲೆಗಳಿಗಾಗಿ ಬರುವ ಸಾರ್ವಜನಿಕರಿಗೆ ಪ್ರತಿ ದಿನ ನಾಳೆ ಬಾ ಎಂದು ಸಮಜಾಯಿಸಿ ವಾಪಾಸ್ ಕಳಿಸುತ್ತಾರೆ. ಪದೇ ಪದೇ ಸಾರ್ವಜನಿಕರನ್ನು ಅಲೆದಾಡಿಸುತ್ತಾರೆ.
ಅನೇಕ ಬಾರಿ ತಹಶೀಲ್ದಾರ್ ಅನಿಲ್ ಅವರಿಗೆ ದೂರು ನೀಡಿದರು ಪ್ರಯೋಜನವಿಲ್ಲ, ಕೆಲಸ ಕಾರ್ಯ ಬಿಟ್ಟು ಕಛೇರಿಗೆ ಅಲೆಯುತ್ತಿರುವ ರೈತರು, ತಾಲೂಕು ಕಛೇರಿ ಅಧಿಕಾರಿಗಳು ಹಾಗು ಸಿಬ್ಬಂದಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.