
ಕೋಲಾರ: ಕ್ರಶರ್ನಲ್ಲಿ ಬಂಡೆ ಒಡೆಯಲು ಸಿದ್ದಮಾಡಲಾಗುತ್ತಿದ್ದಾಗಲೇ ,ಡೈನಾಮಿಕ್ ಸ್ಫೋಟಗೊಂಡಿದೆ. ಈ ವೇಳೆ ಕಲ್ಲು ಬಿದ್ದು ಕಾರ್ಮಿಕನೊಬ್ಬ ಸಾವಿಗೀಡಾದ ಘಟನೆ ಮಾಲೂರು ತಾಲೂಕಿನ ಮಾಕಾರಹಳ್ಳಿ ಬಳಿ ನಡೆದಿದೆ.
ಮೃತ ಕಾರ್ಮಿಕನನ್ನು ಆಂಧ್ರಪ್ರದೇಶ ಮೂಲದ ವೆಂಕಟೇಶ್ (60) ಎಂದು ಗುರುತಿಸಲಾಗಿದೆ. ಅವಘಡದಲ್ಲಿ ಹರೀಶ್ ಮತ್ತು ಈಶ್ವರ್ ಎಂಬುವರಿಗೆ ಗಂಭೀರ ಗಾಯಗಳಾಗಿವೆ. ಬಂಡೆಯನ್ನು ಸ್ಫೋಟಿಸುವ ಮುನ್ನ ಯಾವುದೇ ಮುಂಜಾಗ್ರತೆಯ ಕ್ರಮ ತೆಗೆದುಕೊಳ್ಳದಿರುವುದೇ, ಈ ಅವಘಡಕ್ಕೆ ಕಾರಣ ಎನ್ನಲಾಗುತ್ತಿದೆ. ಇನ್ನಾದರು ಕ್ರಶರ್ ನ ಮಾಲೀಕರು ಹೆಚ್ಚೆತ್ತುಕೊಳ್ಳಬೇಕು. ಕಾರ್ಮಿಕರಿಗೆ ಬೇಕಾದ ಸುರಕ್ಷತೆಯನ್ನು ಒದಗಿಸಬೇಕು.