
ಮಂಗಳೂರು: ಪ್ರಕಾಶ್ ಗೋಪಾಲ್ ಮೂಲ್ಯ (43) ಆತ್ಮಹತ್ಯೆ ಮಾಡಿಕೊಂಡ ಕೈದಿ. ಮಾ.11 ರಂದು ಪ್ರಕಾಶ್ ಗೋಪಾಲ್ ಮೂಲ್ಯನನ್ನು ಮೂಡಬಿದ್ರೆಯ ಪೊಲೀಸರು ಬಂಧಿಸಿದ್ದರು. ನೆರೆ ಮನೆಯ 13 ವರ್ಷದ ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪದಲ್ಲಿ, ಈ ವ್ಯಕ್ತಿಯ ಮೇಲೆ ಪೋಕ್ಸೊ ಪ್ರಕರಣ ದಾಖಲಿಸಲಾಗಿತ್ತು. ಹಾಗೂ ಈತನನ್ನು ವಿಚಾರಣಾಧೀನ ಕೈದಿಯಾಗಿ, ಕಾರಾಗೃಹದಲ್ಲಿರಸಲಾಗಿತ್ತು. ಯಾರು ಇಲ್ಲದ ಸಮಯ ನೋಡಿದ ಪ್ರಕಾಶ್, ಜೈಲಿನ ಶೌಚಾಲಯದ ಕಿಟಕಿ ಗ್ರಿಲ್ಗೆ ಟವಲ್ ಬಳಸಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.

ಪ್ರಕಾಶ್ ಗೋಪಾಲ್ ಮೂಲ್ಯ, ಜೈಲಿನಲ್ಲಿ ಕಳೆದ ಎರಡು ದಿನಗಳಿಂದ ಹೆಚ್ಚಾಗಿ ಯಾರೊಂದಿಗೂ ಬೆರೆಯತ್ತಿರಲಿಲ್ಲ. ಹಾಗೂ ಆತ ಕಿನ್ನತೆಗೊಳಗಾಗಿದ್ದ ಎನ್ನಲಾಗಿದೆ. ಜೈಲಿಗೆ ಬರ್ಕೆ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.